ಬೆಂಗಳೂರು[ಜು. 02] ರಾಜ್ಯದ ದೋಸ್ತಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿಧಾನಸಭೆಯಲ್ಲಿ ಬಿಜೆಪಿಯ 105 ಶಾಸಕರಿದ್ದಾರೆ ಎಂದು ಹೇಳುತ್ತ ಜನರ ತೀರ್ಪು ನಮ್ಮ ಪರವಾಗಿದೆ ಎಂದು ಪ್ರತಿಪಾದನೆ ಮಾಡಿದ್ದರು. 105 ದೊಡ್ಡದೋ ಅಥವಾ 78 ದೊಡ್ಡದೋ ಎಂಬ ಅರ್ಥದಲ್ಲಿ ಪ್ರಶನೆ ಮಾಡಿದ್ದರು.

ಇದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ ನಿಮ್ಮ ಬಳಿ ಸರಕಾರ ರಚಿಸಲು ಸಾಧ್ಯವಾಗುವಂತಿದ್ದರೆ ರಾಜ್ಯಪಾಲರ ಎದುರು ಹಕ್ಕು ಮಂಡನೆ ಮಾಡಿ ಎಂದು ಮರು ಸವಾಲು ಎಸೆದಿದ್ದಾರೆ. ಒಂದೇ ನಿಮಿಷ ತೆಗೆದುಕೊಂಡು ನಿಮ್ಮ ಕೆಟ್ಟ ರಾಜಕಾರಣ ಬದಿಗಿಟ್ಟು ಗಣಿತ ಮತ್ತು ಪ್ರಜಾಪ್ರಭುತ್ವದ ಪಾಠ ಕಲಿಯಿರಿ ಎಂದು ಕಾಲೆಳೆದಿದ್ದಾರೆ.