ಕರಾವಳಿಯಲ್ಲಿ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಹೊಸದಾದ ಟ್ವಿಸ್ಟ್ ಸಿಕ್ಕಿದೆ.
ಮಂಗಳೂರು (ಡಿ.24): ಕರಾವಳಿಯಲ್ಲಿ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಹೊಸದಾದ ಟ್ವಿಸ್ಟ್ ಸಿಕ್ಕಿದೆ. ಮಗಳು ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ ಎಂದು ಯುವತಿಯ ತಾಯಿ ದೂರು ನೀಡಿದ್ದು, ಈ ಸಂಬಂಧ ಇದೀಗ ಕ್ರಮ ಕೈಗೊಳ್ಳಲಾಗಿದೆ.
ಲವ್ ಜಿಹಾದ್ ಹೆಸರಲ್ಲಿ ನಾಪತ್ತೆಯಾಗಿದ್ದ ಜೋಡಿಯು ಮುಂಬೈನಲ್ಲಿ ಪತ್ತೆಯಾಗಿದ್ದು, ಆಕೆಯನ್ನ ಪೊಲೀಸರು ಮುಂಬೈನಿಂದ ಕರೆತಂದು ಕೋರ್ಟ್’ಗೆ ಹಾಜರುಪಡಿಸಿದ್ದು, ಇದೀಗ ಆಕೆಗೆ ಡಿ.26ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮನೆಯವರಿಗೆಲ್ಲಾ ಅಮಲು ಪದಾರ್ಥ ನೀಡಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ದೂರು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಕೆಯನ್ನು ಕೋರ್ಟ್’ಗೆ ಹಾಜರುಪಡಿಸಲಾಗಿದ್ದು, ದೂರಿನ ಆಧಾರದಲ್ಲಿ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಡಿ. 9ರಂದು ತನ್ನ ಮದುವೆಯ ದಿನವೇ ಯುವತಿ ನಾಪತ್ತೆಯಾಗಿದ್ದಳು.
