ಿಸ್ಲಮಾಬಾದ್[ಜೂ.25]: ಪಾಕಿಸ್ತಾನದ ಸುದ್ದಿ ವಾಹಿನಿಯ ಸ್ಟುಡಿಯೋ ಒಂದು ರೆಸ್ಲಿಂಗ್ ಮ್ಯಾಚ್ ಆಗಿ ಪರಿವರ್ತನೆಗೊಂಡಿದೆ. ಲೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ಜಗಳ ತಾರಕಕ್ಕೇರಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಲು ಸಜ್ಜಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ಸುದ್ದಿ ವಾಹಿನಿ ನಡೆಸಿದ್ದ ಲೈವ್ ಕಾರ್ಯಕ್ರಮವೊಂದರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರವರ PTI ಪಕ್ಷದ ಮಸ್ರೂರ್ ಅಲಿ ಸಿಯಾಲ್ ಹಾಗೂ ಕರಾಚಿ ಪ್ರೆಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಜ್ ಖಾನ್ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮದ ನಡುವೆ ಸಿಯಾಲ್, ಇಮ್ತಿಯಾಜ್ ಖಾನ್ ಗೆ 'ನಿಮ್ಮ ಇಂತಹ ವರ್ತನೆ ನಾನು ಸಹಿಸಿಕೊಳ್ಳುವುದಿಲ್ಲ' ಎಂದು ಸಿಟ್ಟಿನಿಂದಲೇ ವಾರ್ನಿಂಗ್ ನೀಡಿದ್ದಾರೆ. ಸಿಯಾಲ್ ವಾರ್ನಿಂಗ್ ಕೇಳಿ ಕೆರಳಿದ ಇಮ್ತಿಯಾಜ್ ತಾವು ಕುಳಿತಲ್ಲಿಂದ ಎದ್ದು ಹೊಡೆಯಲು ಮುಂದಾಗಿದ್ದಾರೆ.

ಇದನ್ನು ಕೇಳಿದ ಆ್ಯಂಕರ್ ಇಬ್ಬರನ್ನೂ ತಡೆಯಲು ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ಕೆರೖ ಮೀರುತ್ತಿದ್ದಂತೆಯೇ ಕಚೇರಿ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಸದ್ಯ ರಾಜಕಾರಣಿಗಳ ಈ ತಿಕ್ಕಾಟ ವೈರಲ್ ಆಗಿದೆ.