ಸಹೋದ್ಯೋಗಿಗೆ ಹ್ಯಾಂಡ್ಸಮ್ ಎಂದ ಆ್ಯಂಕರ್ ಸಸ್ಪೆಂಡ್..!

First Published 26, May 2018, 4:21 PM IST
TV Anchor Suspended for calling male colleague as handsome
Highlights

ಪುರುಷ ಸಹೋದ್ಯೋಗಿಯನ್ನು ಹ್ಯಾಂಡ್ಸಮ್ ಎಂದು ಕರೆದ ಕಾರಣಕ್ಕೆ ಮಹಿಳಾ ನಿರೂಪಕಿಯನ್ನು ಕೆಲಸದಿಂದ ವಜಾ ಮಾಡಿದ ಘಟನೆ ಕುವೈತ್ ನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಮಾಧ್ಯಮ ಸಂಸ್ಥೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಬಸಿಮಾ-ಅಲ್ ಶಮರ್ ಎಂಬಾಕೆಯೇ ಕೆಲಸ ಕಳೆದುಕೊಂಡ ದುರ್ದೈವಿ.

ಕುವೈತ್ (ಮೇ.26):ಪುರುಷ ಸಹೋದ್ಯೋಗಿಯನ್ನು ಹ್ಯಾಂಡ್ಸಮ್ ಎಂದು ಕರೆದ ಕಾರಣಕ್ಕೆ ಮಹಿಳಾ ನಿರೂಪಕಿಯನ್ನು ಕೆಲಸದಿಂದ ವಜಾ ಮಾಡಿದ ಘಟನೆ ಕುವೈತ್ ನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಮಾಧ್ಯಮ ಸಂಸ್ಥೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಬಸಿಮಾ-ಅಲ್ ಶಮರ್ ಎಂಬಾಕೆಯೇ ಕೆಲಸ ಕಳೆದುಕೊಂಡ ದುರ್ದೈವಿ.

ಸುದ್ದಿ ಓದುವ ಸಂದರ್ಭದಲ್ಲಿ ಅದೇ ಚಾನೆಲ್ ನಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುವ ನವಾಫ್-ಅಲ್-ಶೈರಾಕಿ ಎಂಬುವವರಿಗೆ ಬಸಿಮಾ ಹ್ಯಾಂಡ್ಸಮ್ ಎಂದು ಕರೆದಿದ್ದರು. ಈ ವೇಳೆ ಚಾನೆಲ್ ನೋಡುತ್ತಿದ್ದ ಕುವೈತ್ ಪಾರ್ಲಿಮೆಂಟ್ ನ ಸಂಸದರೋವರ್ವರು, ಮಹಿಳೆ ಸಾರ್ವಜನಿಕವಾಗಿ ಈ ರೀತಿ ಪುರುಷನೊಂದಿಗೆ ಹಗುರವಾಗಿ ಮಾತನಾಡುವುದು ಅಕ್ಷಮ್ಯ ಎಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಖಾಸಗಿ ಚಾನೆಲ್ ಬಸಿಮಾ ಅವರನ್ನು ಕೆಲಸದಿಂದ ವಜಾ ಮಾಡಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಬಸಿಮಾ ಅವರನ್ನು ಕೆಲಸದಿಂದ ವಜಾ ಮಾಡಿದ್ದು ಸರಿಯಲ್ಲ ಎಂದು ಬಹುತೇಕರು ವಾದಿಸುತ್ತಿದ್ದಾರೆ.

loader