ಪ್ರಸಿದ್ಧ ಟಿವಿ ನಟಿ ಪ್ರಿಯಾಂಕ ಆತ್ಮಹತ್ಯೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Jul 2018, 12:37 PM IST
TV Actress Commits Suicide
Highlights

ಪ್ರಸಿದ್ಧ ಸೀರಿಯಲ್ ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. 

 ಚೆನ್ನೈ:  ವಿವಿಧ ತಮಿಳಿನ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಸಿದ್ಧ ಟಿವಿ ತಾರೆ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಲಸರ ಒಕ್ಕಮ್ ನಿವಾಸಕ್ಕೆ  ಇಂದು ಬೆಳಗ್ಗೆ ಮನೆ ಕೆಲಸಕ್ಕೆ ಬಂದ  ಕೆಲಸದಾಕೆಯಿಂದ ಈ  ವಿಚಾರ ಬೆಳಕಿಗೆ ಬಂದಿದೆ. 

ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಇಂದು ಬೆಳಗ್ಗೆ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ.ತಮಿಳಿನ ವಂಶಮ್ ಧಾರಾವಾಹಿಯಲ್ಲಿ ಪ್ರಿಯಾಂಕ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ರಮ್ಯ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. 

ಈಗಾಗಲೇ ಈ ಸಂಬಂಧ ತನಿಖೆ ಕೈಗೊಳ್ಳಲಾಗಿದ್ದು, ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರಿಯಾಂಕ ವಿವಾಹವಾಗಿದ್ದು, ಪತಿ - ಪತ್ನಿಯರು ಭಿನ್ನಾಭಿಪ್ರಾಯವನ್ನು ಹೊಂದಿದ್ದರು ಎನ್ನಲಾಗಿದೆ. 

loader