ಇಸ್ತಾಂಬುಲ್[ಜು.02]: ಜನರನ್ನು ಅಪಾಯದಿಂದ ರಕ್ಷಿಸುವ ಸೂಪರ್‌ ಮ್ಯಾನ್‌ ಅನ್ನು ಟೀವಿಯಲ್ಲಿ ನೋಡಿರುತ್ತೀರಿ. ಅದೇರೀತಿ ಇಸ್ತಾಂಬುಲ್‌ನಲ್ಲಿ ವ್ಯಕ್ತಿಯೊಬ್ಬ ಮನೆಯ 2ನೇ ಅಂತಸ್ತಿನಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಕ್ರಿಕೆಟ್‌ನಲ್ಲಿ ಚೆಂಡನ್ನು ಕ್ಯಾಚ್‌ ಹಿಡಿಯುವ ರೀತಿಯಲ್ಲೇ ಹಿಡಿದು ರಕ್ಷಿಸಿದ್ದಾನೆ.

ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಕಿಟಕಿಯಿಂದ ಜಾರಿ ಕಳಕ್ಕೆ ಬೀಳುವುದನ್ನು ನೋಡಿದ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಫೆಯುಜಿ ಜಬಾತ್‌ ಎಂಬಾತ ಆ ಮಗುವನ್ನು ಕೈಯಿಂದ ಹಿಡಿದಿದ್ದಾನೆ. ಕಟ್ಟಡದಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಈತ ಕೈಯಲ್ಲಿ ಹಿಡಿದ ದೃಶ್ಯವೀಗ ವೈರಲ್‌ ಆಗಿದೆ.