ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಪೊಲೀಸ್ ಅಧೀಕ್ಷಕಿಯೇ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಡ್ಯೂಟಿಯಲ್ಲಿದ್ದ ಪಿಎಸ್‍ಐರವರನ್ನು ತಮ್ಮ ಖಾಸಗಿ ಸಹಾಯಕ್ಕೆ ಬಳಸಿಕೊಂಡಿದ್ದಲ್ಲದೆ ಪೊಲೀಸ್ ಕಾರಿನಲ್ಲಿ ಕರೆದುಕೊಂಡು ಹೋಗುವ ಎಸ್ಕಾರ್ಟ್ ಸೇವೆಯನ್ನೂ ಪಡೆದಿದ್ದಾರೆ.

ತುಮಕೂರು(ಜುಲೈ 25): ತನ್ನ ತಾಯಿ ಹಾಗೂ ಮಗಳನ್ನು ಧಾರ್ಮಿಕ ಕೇಂದ್ರವೊಂದಕ್ಕೆ ಭೇಟಿ ಮಾಡಿಸಲು ಸರ್ಕಾರಿ ವಾಹನ ಹಾಗೂ ಪಿಎಸ್‍'ಐ ಭದ್ರತೆಯನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ತುಮಕೂರು ಎಸ್ಪಿ ದಿವ್ಯಾ ಗೋಪಿನಾಥ್ ಮೇಲೆ ಕೇಳಿಬಂದಿದೆ. ದಿವ್ಯಾ ಗೋಪಿನಾಥ್‍'ರವರ ತಾಯಿ ಹಾಗೂ ಮಗಳನ್ನು ಕೊರಟಗೆರೆ ಪಿಎಸ್‍'ಐ ಮಂಜುನಾಥ್ ತಮ್ಮ ಪೊಲೀಸ್ ವಾಹನದಲ್ಲಿ ಇಬ್ಬರು ಕಾನ್ಸ್‌'ಟೇಬಲ್ ರಕ್ಷಣೆಯಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ಕರೆದುಕೊಂಡು ಹೋಗಿರುವ ವಿಡಿಯೋ ದೊರಕಿದ್ದು, ವ್ಯಾಪಕ ಟೀಕೆಗೆ ಗುರಿಯಾದಂತಾಗಿದೆ.

ಒಟ್ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಪೊಲೀಸ್ ಅಧೀಕ್ಷಕಿಯೇ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಡ್ಯೂಟಿಯಲ್ಲಿದ್ದ ಪಿಎಸ್‍ಐರವರನ್ನು ತಮ್ಮ ಖಾಸಗಿ ಸಹಾಯಕ್ಕೆ ಬಳಸಿಕೊಂಡಿದ್ದಲ್ಲದೆ ಪೊಲೀಸ್ ಕಾರಿನಲ್ಲಿ ಕರೆದುಕೊಂಡು ಹೋಗುವ ಎಸ್ಕಾರ್ಟ್ ಸೇವೆಯನ್ನೂ ಪಡೆದಿದ್ದಾರೆ.