ಬೆಂಗಳೂರು[ಡಿ.06]  ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೆನ್ನೈನಿಂದ ಆಗಮಿಸಿದ್ದ ವೈದ್ಯರ ತಂಡ ಶ್ರೀಗಳ ಆರೋಗ್ಯದ ವಿವರ ಪಡೆದುಕೊಂಡು ತೆರಳಿದೆ.

ಸಿಎಂ ಕುಮಾರಸ್ವಾಮಿ ಶೃಂಗೇರಿಯಲ್ಲಿ ಇದ್ದರೂ ಶ್ರೀಗಳ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದಾರೆ.  ಶ್ರೀಗಳನ್ನು ಹೆಚ್ಚಿನ ಆರೈಕೆಗಾಗಿ ಚೆನ್ನೈಗೆ ಕರೆದುಕೊಂಡು ಹೋಗಬೇಕೆ? ಎನ್ನುವ ಮಾತುಕತೆ ಸಹ ನಡೆದಿದೆ.

ನನಗೆಷ್ಟು ವಯಸ್ಸಾಯ್ತು? ಎಂದು ಪ್ರಶ್ನಿಸಿದ ಸಿದ್ದಗಂಗಾ ಶ್ರೀಗಳು

ಒಂದು ವೇಳೆ ಕರೆದುಕೊಂಡು ಹೋಗುವುದಾದರೆ ಹೇಗೆ? ರಸ್ತೆ ಮೂಲಕವೋ ಅಥವಾ ಹೆಲಿಕಾಪ್ಟರ್ ಮೂಲಕವೋ ಎಂಬ ಚರ್ಚೆ ಸಹ ನಡೆದಿದೆ. ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಮಾಹಿತಿ ನೀಡಿದ್ದಾರೆ.