ಮುಸ್ಲಿಂ ಯುವಕನಿಂದ ಸಿದ್ದಗಂಗಾ ಶ್ರೀಗಳ ವಿಶೇಷ ಹುಟ್ಟುಹಬ್ಬ

news | Saturday, March 24th, 2018
Suvarna Web Desk
Highlights

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಇರ್ಫಾನ್ ಜೆ.ಕೆ ಎಂಬ ಯುವಕ ಶ್ರೀಗಳಿಗೆ ಪೂಜೆ ಸಲ್ಲಿಸಿದವನು. ಶತಾಯುಶಿ ಸಿದ್ದಗಂಗಾ ಶ್ರೀಗಳು ಬರುವ ಏಪ್ರಿಲ್ 1ಕ್ಕೆ 111 ನೇ ವರ್ಷಕ್ಕೆ ಕಾಲುಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಆ ದಿನದ ‌ಪ್ರಚಾರಕ್ಕೆಂದು ಶ್ರೀಗಳ ಪುತ್ಥಳಿಯಿರುವ ಬೆಳ್ಳಿರಥ‌ ನಿನ್ನೆ ಕೊಡಿಗೇನಹಳ್ಳಿಗೆ ತಲುಪಿದೆ.‌ ಇದನ್ನ ಗಮನಿಸಿದ ಇರ್ಫಾನ್‌ ಶಾಮಿಯಾನ ಹಾಕಿಸಿ ಸಿದ್ದಗಂಗಾ ಶ್ರೀಗಳಿಗೆ‌ ಪೂಜೆ ಸಲ್ಲಿಸಿ, ಊರಿಗೆಲ್ಲಾ ಪಾನಕ‌ ಮಜ್ಜಿಗೆ ಹಂಚಿದ್ದಾರೆ.

ತುಮಕೂರು(ಮಾ.24): ಮುಸ್ಲಿಂ ಯುವಕನೊಬ್ಬ ಸಿದ್ದಗಂಗಾ ಶ್ರೀಗಳಿಗೆ ಹಿಂದೂ ಸಂಪ್ರದಾಯದ ಪ್ರಕಾರ‌ ಪೂಜೆ ಸಲ್ಲಿಸಿ ಊರಿಗೆಲ್ಲಾ ಪಾನಕ,ಮಜ್ಜಿಗೆ, ಹೆಸರುಬೇಳೆ ಹಂಚಿರುವ ವಿಶೇಷ ಆಚರಣೆ ನಡೆದಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಇರ್ಫಾನ್ ಜೆ.ಕೆ ಎಂಬ ಯುವಕ ಶ್ರೀಗಳಿಗೆ ಪೂಜೆ ಸಲ್ಲಿಸಿದವನು. ಶತಾಯುಶಿ ಸಿದ್ದಗಂಗಾ ಶ್ರೀಗಳು ಬರುವ ಏಪ್ರಿಲ್ 1ಕ್ಕೆ 111 ನೇ ವರ್ಷಕ್ಕೆ ಕಾಲುಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಆ ದಿನದ ‌ಪ್ರಚಾರಕ್ಕೆಂದು ಶ್ರೀಗಳ ಪುತ್ಥಳಿಯಿರುವ ಬೆಳ್ಳಿರಥ‌ ನಿನ್ನೆ ಕೊಡಿಗೇನಹಳ್ಳಿಗೆ ತಲುಪಿದೆ.‌ ಇದನ್ನ ಗಮನಿಸಿದ ಇರ್ಫಾನ್‌ ಶಾಮಿಯಾನ ಹಾಕಿಸಿ ಸಿದ್ದಗಂಗಾ ಶ್ರೀಗಳಿಗೆ‌ ಪೂಜೆ ಸಲ್ಲಿಸಿ, ಊರಿಗೆಲ್ಲಾ ಪಾನಕ‌ ಮಜ್ಜಿಗೆ ಹಂಚಿದ್ದಾರೆ.

ಯುವಕನ ಈ ನಡೆಗೆ ನೆರೆಹೊರೆಯುವರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Comments 0
Add Comment