ತುಮಕೂರಿನ ಹೇಮಾವತಿ ನೀರಿನ ಹೋರಾಟಕ್ಕೆ ಮೊದಲ ಬಲಿಯಾಗಿದೆ. ಗುಬ್ಬಿ ತಾಲೂಕಿನ ಸೋಮಲಾಪುರದಲ್ಲಿ ರೈತನೊಬ್ಬ ನಾಲೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತುಮಕೂರು(ಆ.31): ತುಮಕೂರಿನ ಹೇಮಾವತಿ ನೀರಿನ ಹೋರಾಟಕ್ಕೆ ಮೊದಲ ಬಲಿಯಾಗಿದೆ. ಗುಬ್ಬಿ ತಾಲೂಕಿನ ಸೋಮಲಾಪುರದಲ್ಲಿ ರೈತನೊಬ್ಬ ನಾಲೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಲುವರಾಜು (35) ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ. ಈ ರೈತ ತೂಬು ಮುಚ್ಚುವುದನ್ನು ವಿರೋಧಿಸಿ ನಾಲೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲೆಗೆ ಹಾರಿದಾಗ ನೀರಿನ ಸೆಳೆತಕ್ಕೆ ಸಿಕ್ಕು ಈ ರೈತ ಕೊಚ್ಚಿಹೋಗಿದ್ದಾನೆ.
ಸೋಮಲಾಪುರಕ್ಕೆ ನೀರು ನಿಲ್ಲಿಸಿ, ಕುಣಿಗಲ್ಗೆ ನೀರು ಬಿಡುವಂತೆ ತುಮಕೂರು ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಪೊಲೀಸರು ಡಿಸಿಯ ಆದೇಶವನ್ನು ಪಾಲಿಸಲು ಮುಂದಾಗಿದ್ದರು. ಆದರೆ ನಾಲೆ ಬಳಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ರೈತರಿಂದ ಪ್ರತಿಭಟನೆಯೂ ನಡೆದಿತ್ತು. ಇವೆಲ್ಲದರಿಂದ ಬೇಸತ್ತ ರೈತ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
