Asianet Suvarna News Asianet Suvarna News

ಕಗ್ಗಂಟಾದ 2 ಖಾತೆಗಳು : ಉಳಿದಂತೆ ಯಾರಿಗೆ ಯಾವ ಖಾತೆ..?

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಳಿಕ ಆರಂಭವಾದ ಸಮಸ್ಯೆ ಇನ್ನೂ ಕೂಡ ಮುಂದುವರಿದಿದೆ. ಇದೀಗ ಈ ಸಮಸ್ಯೆ ಪರಿಹಾರದ ಹೊಣೆ ರಾಹುಲ್  ಗಾಂಧಿಗೆ ವರ್ಗಾವಣೆಯಾಗಿದೆ. 

Tug Of War Continue In Karnataka politics After Cabinet Expansion
Author
Bengaluru, First Published Dec 27, 2018, 7:10 AM IST

ಬೆಂಗ​ಳೂರು :  ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವರ್‌ ಹಾಗೂ ಜಲ​ಸಂಪ​ನ್ಮೂಲ ಸಚಿವ ಡಿ.ಕೆ. ಶಿವ​ಕು​ಮಾರ್‌ ಅವರು ತಮ್ಮ ಬಳಿ ಇರುವ ಪ್ರಮುಖ ಖಾತೆ​ಗ​ಳನ್ನು ಬಿಟ್ಟು​ಕೊ​ಡಲು ನೇರ​ವಾಗಿ ನಿರಾ​ಕ​ರಿ​ಸಿದ ಹಿನ್ನೆ​ಲೆ​ಯಲ್ಲಿ ಖಾತೆ-ಕ್ಯಾತೆ ಪರಿ​ಹ​ರಿ​ಸಲು ಮಧ್ಯ​ಸ್ಥಿಕೆ ವಹಿ​ಸಿದ್ದ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಮಾಡಿದ ಪ್ರಯ​ತ್ನ​ಗಳು ಫಲ ನೀಡಿಲ್ಲ. ಪರಿ​ಣಾಮ ಈ ನಾಯ​ಕರು ಹೊಂದಿ​ರುವ ಎರಡು ಪ್ರಮುಖ ಖಾತೆ​ಗಳ ಬಗ್ಗೆ ಅಂತಿಮ ತೀರ್ಮಾನ ಇದೀಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಂಗಳ ತಲು​ಪಿ​ದೆ.

ಖಾತೆ-ಕ್ಯಾತೆಗೆ ಪರಿ​ಹಾರ ಕಂಡು​ಕೊ​ಳ್ಳಲು ಬುಧ​ವಾರ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ನೇತೃ​ತ್ವ​ದಲ್ಲಿ ನಡೆದ ರಾಜ್ಯ ನಾಯ​ಕರ ಸಭೆ​ಯಲ್ಲಿ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಉಪ ಮುಖ್ಯ​ಮಂತ್ರಿ ಡಾ.ಜಿ.ಪರ​ಮೇ​ಶ್ವರ್‌ ನಡು​ವೆ ಮಾತಿನ ಚಕ​ಮಕಿ ನಡೆದಿದೆ. ಹೀಗಾಗಿ ಕ್ಯಾತೆಗೆ ಪರಿ​ಹಾರ ದೊರೆ​ಯದೇ ಈ ವಿಚಾರ ರಾಹುಲ್‌ ಗಾಂಧಿ ಅಂಗಳ ತಲು​ಪಿದೆ. ಸಭೆ​ಯಲ್ಲಿ ಪರ​ಮೇ​ಶ್ವರ್‌ ಹೆಚ್ಚು​ವ​ರಿ​ಯಾಗಿ ಹೊಂದಿ​ರುವ ಗೃಹ ಅಥವಾ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಮತ್ತು ಶಿವ​ಕು​ಮಾರ್‌ ಅವರು ಹೊಂದಿ​ರುವ ಜಲ​ಸಂಪ​ನ್ಮೂಲ ಹಾಗೂ ವೈದ್ಯ ಶಿಕ್ಷಣ ಈ ಪೈಕಿ ಇಬ್ಬರೂ ತಲಾ ಒಂದು ಖಾತೆ ಬಿಟ್ಟು​ಕೊ​ಡ​ಬೇಕು ಮತ್ತು ಈ ನಾಯ​ಕರು ಬಿಟ್ಟು​ಕೊ​ಡುವ ಈ ಪ್ರಮುಖ ಖಾತೆ​ಗಳ ಪೈಕಿ ತಲಾ ಒಂದನ್ನು ನೂತನ ಸಚಿ​ವ​ರಾದ ಎಂ.ಬಿ.ಪಾಟೀಲ್‌ ಹಾಗೂ ಇ.ತುಕಾರಾಂ ಅವ​ರಿಗೆ ನೀಡುವ ಬಗ್ಗೆ ಚರ್ಚೆ​ಯಾ​ಗಿದೆ.

ಮತ್ತೊಂದು ಮೂಲದ ಪ್ರಕಾರ ಕೇವಲ ಗೃಹ ಹಾಗೂ ವೈದ್ಯ​ಕೀಯ ಶಿಕ್ಷಣ ಮಾತ್ರ​ವ​ಲ್ಲದೆ, ಕೃಷ್ಣ ಬೈರೇ​ಗೌಡ ಅವರು ಹೊಂದಿ​ರುವ ಗ್ರಾಮೀ​ಣಾ​ಭಿ​ವೃದ್ಧಿ ಹಾಗೂ ಪಂಚಾ​ಯತ್‌ ರಾಜ್‌ ಮತ್ತು ಕಾನೂನು ಖಾತೆ​ಗಳ ಪೈಕಿ ಗ್ರಾಮೀ​ಣಾ​ಭಿ​ವೃ​ದ್ಧಿ​ಯನ್ನು ಹಿಂಪ​ಡೆ​ಯುವ ಬಗ್ಗೆ ಹಾಗೂ ಕೆ.ಜೆ. ಜಾಜ್‌ರ್‍ ಹೊಂದಿ​ರುವ ಕೈಗಾ​ರಿಕೆ ಹಾಗೂ ಐಟಿ-ಬಿಟಿ ಖಾತೆಗಳ ಪೈಕಿ ಐಟಿ-ಬಿಟಿ ಖಾತೆ​ಯನ್ನು ಹಿಂಪ​ಡೆದು ನೂತನ ಸಚಿ​ವ​ರಿಗೆ ಹಂಚುವ ಬಗ್ಗೆಯೂ ಸಭೆ​ಯಲ್ಲಿ ಚರ್ಚೆ​ಯಾ​ಗಿದೆ. ಆದರೆ, ಈ ಬಗ್ಗೆ ಪಕ್ಷದ ಹಿರಿಯ ನಾಯ​ಕ​ರಲ್ಲೇ ಒಮ್ಮತ ಮೂಡಿಲ್ಲ.

ಅದ​ರಲ್ಲೂ ಗೃಹ ಖಾತೆ ಹಾಗೂ ವೈದ್ಯ ಶಿಕ್ಷಣ ಖಾತೆ​ಯನ್ನು ಹಿಂಪ​ಡೆ​ಯುವ ಪ್ರಸ್ತಾ​ಪಕ್ಕೆ ಪರ​ಮೇ​ಶ್ವರ್‌ ಹಾಗೂ ಶಿವ​ಕು​ಮಾರ್‌ ಅವರು ಈ ಸೂತ್ರಕ್ಕೆ ಸುತರಾಂ ಒಪ್ಪಿಲ್ಲ. ಒಂದು ಹಂತ​ದ​ಲ್ಲಂತೂ ಪರ​ಮೇ​ಶ್ವರ್‌ ಹಾಗೂ ಸಿದ್ದ​ರಾ​ಮಯ್ಯ ನಡುವೆ ಮಾತಿನ ಚಕ​ಮಕಿ ಸಹ ನಡೆ​ಯಿತು ಎನ್ನ​ಲಾ​ಗಿದೆ. ಅಂತಿ​ಮ​ವಾಗಿ ಪ್ರಮುಖ ಖಾತೆ​ಗ​ಳನ್ನು ಹಿಂಪ​ಡೆ​ಯಬೇಕೋ ಅಥವಾ ಹಾಲಿ ಪ್ರಭಾವ ಸಚಿ​ವ​ರಲ್ಲೇ ಸದರಿ ಖಾತೆ​ಗ​ಳನ್ನು ಮುಂದು​ವ​ರೆ​ಸ​ಬೇಕೋ ಎಂಬ​ಬಗ್ಗೆ ರಾಹುಲ್‌ ಗಾಂಧಿ ಅವರೇ ಅಂತಿಮ ತೀರ್ಮಾನ ಕೈಗೊ​ಳ್ಳಲಿ ಎಂದು ಸಭೆ ನಿರ್ಧ​ರಿ​ಸಿದ್ದು, ರಾಹುಲ್‌ ತೆಗೆ​ದು​ಕೊ​ಳ್ಳುವ ತೀರ್ಮಾ​ನಕ್ಕೆ ಎಲ್ಲರೂ ಬದ್ಧ​ರಾ​ಗಲು ಸಭೆ ತೀರ್ಮಾ​ನಿ​ಸಿತು ಎಂದು ಮೂಲ​ಗಳು ಹೇಳಿ​ವೆ.

ಉಳಿ​ದಂತೆ ನೂತನ ಸಚಿ​ವ​ರಾದ ಸಿ.ಎಸ್‌. ಶಿವಳ್ಳಿ ಅವ​ರಿಗೆ ಪೌರಾ​ಡ​ಳಿತ (ರ​ಮೇಶ್‌ ಜಾರ​ಕಿ​ಹೊಳಿ ಅವ​ರಿಗೆ ಸಚಿವ ಸ್ಥಾನ​ದಿಂದ ಕೊಕ್‌ ನೀಡಿ​ದ್ದ​ರಿಂದ ತೆರ​ವಾದ ಖಾತೆ), ಸತೀಶ್‌ ಜಾರ​ಕಿ​ಹೊಳಿ ಅವ​ರಿಗೆ ಅರಣ್ಯ (ಶಂಕರ್‌ ಅವ​ರಿಗೆ ಸಚಿವ ಸ್ಥಾನ​ದಿಂದ ಕೊಕ್‌ ನೀಡಿ​ದ್ದ​ರಿಂದ ತೆರ​ವಾದ ಖಾತೆ), ಎಂ.ಟಿ.ಬಿ. ನಾಗ​ರಾಜು ಅವ​ರಿಗೆ ವಸತಿ (ಯು.ಟಿ. ಖಾದರ್‌ ಬಳಿ ಇದ್ದ ಹೆಚ್ಚು​ವರಿ ಖಾತೆ), ರಹೀಂ ಖಾನ್‌ ಅವ​ರಿಗೆ ಅಲ್ಪ​ಸಂಖ್ಯಾ​ತರ ಕಲ್ಯಾಣ (ಜ​ಮೀರ್‌ ಅಹ್ಮದ್‌ ಬಳಿಯಿದ್ದ ಹೆಚ್ಚ​ವರಿ ಖಾತೆ), ಆರ್‌.ಬಿ. ತಿಮ್ಮಾ​ಪುರ ಅವ​ರಿಗೆ ಕೌಶ​ಲ್ಯಾ​ಭಿ​ವೃದ್ಧಿ (ಆ​ರ್‌.ವಿ. ದೇಶ​ಪಾಂಡೆ ಅವರ ಬಳಿ​ಯಿದ್ದ ಹೆಚ್ಚು​ವರಿ ಖಾತೆ) ಖಾತೆ ನೀಡುವ ಬಗ್ಗೆ ಸಭೆ ನಿರ್ಧರಿಸಿತು ಎನ್ನಲಾಗಿದೆ. ಡಾ

ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ತಮ್ಮಲ್ಲಿರುವ ಹೆಚ್ಚುವರಿ ಖಾತೆ ಬಿಟ್ಟುಕೊಡಲು ಒಪ್ಪಿಲ್ಲದಿರುವುದರಿಂದ ಎಂ.ಬಿ.ಪಾಟೀಲ್‌, ಪಿ.ಟಿ. ಪರ​ಮೇ​ಶ್ವರ್‌ ನಾಯ್‌್ಕ ಹಾಗೂ ತುಕಾರಾಂ ಅವರಿಗೆ ನೀಡುವ ಖಾತೆಗಳ ಬಗ್ಗೆ ಇನ್ನೂ ಚಿತ್ರಣ ಸ್ಪಷ್ಟವಾಗಿಲ್ಲ.

ರಾಜ್ಯ ನಾಯ​ಕರು ಸಿದ್ಧಪ​ಡಿ​ಸಿರುವ ಈ ಪಟ್ಟಿ​ಯೊಂದಿಗೆ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಅವರು ದೆಹ​ಲಿಗೆ ತೆರ​ಳಿ​ದ್ದು, ರಾಹುಲ್‌ ಗಾಂಧಿ ಅವ​ರೊಂದಿಗೆ ಸಮಾ​ಲೋ​ಚನೆ ನಡೆ​ಸ​ಲಿ​ದ್ದಾರೆ. ಹೈಕ​ಮಾಂಡ್‌ ಬಳಿ ಚರ್ಚೆಯ ವೇಳೆ ಪರ​ಮೇ​ಶ್ವ​ರ್‌​ ಹಾಗೂ ಶಿವ​ಕು​ಮಾರ್‌ ಅವರಿಗೆ ಹೆಚ್ಚು​ವರಿ ಖಾತೆ​ಗ​ಳನ್ನು ಮುಂದು​ವ​ರಿ​ಸ​ಬೇಕೋ ಅಥವಾ ಬಿಟ್ಟು​ಕೊ​ಡ​ಬೇಕೋ ಎಂಬುದು ತೀರ್ಮಾ​ನ​ವಾ​ಗ​ಲಿದೆ. ಇದ​ಲ್ಲದೆ, ಹಾಲಿ ಪಟ್ಟಿ​ಯಲ್ಲಿ ಹೈಕ​ಮಾಂಡ್‌ ಕೂಡ ಕೆಲ​ವೊಂದು ಬದ​ಲಾ​ವಣೆ ಮಾಡುವ ಸಾಧ್ಯ​ತೆಯೂ ಇದೆ ಎಂದು ಹೇಳ​ಲಾ​ಗು​ತ್ತಿ​ದೆ.

2 ಖಾತೆಗಳು ಕಗ್ಗಂಟು:

ಉಳಿದವು ಸಲೀಸು!

- ತುಕಾರಾಂ, ಎಂ.ಬಿ.ಪಾಟೀಲ್‌ ಖಾತೆ ಗೊಂದಲ

2ನೇ ಖಾತೆ ಬಿಡಲು ಪ್ರಭಾವಿಗಳ ಹಿಂದೇಟು

- ಗೃಹ ಅಥವಾ ಬೆಂಗಳೂರು ಅಭಿವೃದ್ಧಿ ಬಿಡೋಲ್ಲ: ಪರಂ

ವೈದ್ಯಕೀಯ ಶಿಕ್ಷಣ ಕೊಡಲ್ಲ: ಡಿಕೆಶಿ

- ಉಳಿದ ಖಾತೆ ಅಂತಿಮ: ರಾಹುಲ್‌ ಸಮ್ಮತಿ ಬಾಕಿ

2 ಖಾತೆ ವಿವಾದ ಹೈಕಮಾಂಡ್‌ ಅಂಗಳಕ್ಕೆ

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ

2 ಖಾತೆ ಹೊಂದಿರುವ ಪ್ರಭಾವಿಗಳು ಒಂದು ಖಾತೆ ಬಿಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ‘ಕನ್ನಡಪ್ರಭ’ ಡಿ.23ರಂದೇ ವರದಿ ಮಾಡಿತ್ತು.

ಸಂಭಾವ್ಯ ಖಾತೆ

ಸಿ.ಎಸ್‌.ಶಿವಳ್ಳಿ - ಪೌರಾ​ಡ​ಳಿ​ತ

ಸತೀಶ್‌ ಜಾರ​ಕಿ​ಹೊಳಿ - ಅರ​ಣ್ಯ

ಎಂ.ಟಿ.ಬಿ. ನಾಗ​ರಾಜ್‌ - ವಸ​ತಿ

ರಹೀಂ ಖಾನ್‌ - ಅಲ್ಪ​ಸಂಖ್ಯಾತ ಕಲ್ಯಾ​ಣ

ಆರ್‌.ಬಿ.ತಿಮ್ಮಾ​ಪುರ - ಕೌಶ​ಲ್ಯಾ​ಭಿ​ವೃ​ದ್ಧಿ

ಪಿ.ಟಿ.ಪರ​ಮೇ​ಶ್ವರ್‌ ನಾಯಕ್- ಯುವ ಸಬಲೀಕರಣ/ ಮುಜರಾಯಿ

ಕಗ್ಗಂಟು

ಎಂ.ಬಿ. ಪಾಟೀಲ್‌ - ಗೃಹ ಖಾತೆ

ತುಕಾ​ರಾಂ- ವೈದ್ಯ​ಕೀಯ ಶಿಕ್ಷಣ

Follow Us:
Download App:
  • android
  • ios