ಶಶಿಕಲಾರನ್ನು ಭೇಟಿ ಮಾಡಿದ ದಿನಕರನ್

ಬೆಂಗಳೂರು(ಆ.18): ತಮಿಳುನಾಡು ಮಾಜಿ ಸಿಎಂ ಜಯಲಲಿತಾರ ಸಾವಿನ ರಹಸ್ಯದ ತನಿಖೆಗೆ ಹಾಲಿ ಸಿಎಂ ಪಳನಿಸ್ವಾಮಿ ಸರ್ಕಾರ ಆದೇಶಿಸಿರುವ ಬೆನ್ನಲ್ಲೇ ಎಐಡಿಎಂಕೆ ಮುಖಂಡ ಟಿ.ಟಿ.ವಿ.ದಿನಕರನ್ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಇಂದು ಶಶಿಕಲಾರ 63ನೇ ಹುಟ್ಟುಹಬ್ಬದ ನೆಪ ಮಾಡಿಕೊಂಡು ಕುಟುಂಬದೊಂದಿಗೆ ಶಶಿಕಲಾ ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾತನಾಡಿದ ದಿನಕರನ್, ಹಾಲಿ ಸಿಎಂ ಪಳನಿಸ್ವಾಮಿ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಅಮ್ಮನ ಸಾವಿನ ತನಿಖೆ ನಡೆಸಲು ಮುಂದಾಗಿದ್ದಾರೆ. ಈ ತನಿಖೆಯಲ್ಲಿ ಶಶಿಕಲಾ ನಿರ್ದೊಷಿಯಾಗಿ ಹೊರ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred