ಸಂತೋಷ್ ಲಾಡ್ ಒಳ್ಳೆಯ ಮನುಷ್ಯನೇ. ಆದರೆ, ಅವರ ಬೆಂಬಲಿಗರು ಲಾಡ್ ಅವರ ಅಧಿಕಾರ ದುರುಪಯೋಗ ಮಾಡಿಕೊಂಡು ಬಳ್ಳಾರಿಯಲ್ಲಿ ದಾಂಧಲೆ ನಡೆಸುತ್ತಿದ್ದಾರೆ. ಇವರ ಪುಂಡಾಟಗಳ ವಿರುದ್ಧ ಯಾರೂ ಉಸಿರೆತ್ತದಂತೆ ದರ್ಪ ತೋರುತ್ತಾರೆ ಎಂದು ಮಲ್ಲಿಕಾರ್ಜುನ್ ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ.

ಬೆಂಗಳೂರು(ಫೆ. 28): ಗಣಿನಾಡು ಬಳ್ಳಾರಿಯಲ್ಲಿ ಅಕ್ರಮದ ವಿರುದ್ಧ ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ ಗ್ಯಾಂಗ್ ಇದೆಯಾ? ಸುನಾಮಿ ಗ್ಯಾಂಗ್ ಎಂದು ಕುಖ್ಯಾತವಾಗಿರುವ ತಂಡವೊಂದು ಬಳ್ಳಾರಿಯಲ್ಲಿದೆಯಂತೆ. ಹಾಗಂತ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್ ಅವರು ಆರೋಪಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ, ಸುನಾಮಿ ಗ್ಯಾಂಗ್ ಬಗ್ಗೆ ಒಂದಷ್ಟು ವಿವರ ನೀಡಿದ್ದಾರೆ. ಅವರ ಪ್ರಕಾರ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಸಂತೋಷ್ ಲಾಡ್ ಅವರ ಬೆಂಬಲಿಗರು ಸುನಾಮಿ ಗ್ಯಾಂಗ್'ನ ಸದಸ್ಯರಾಗಿದ್ದಾರೆ. ಭೂಟಿ ಹನುಮಾ ನಾಯ್ಕ್, ಚಂದ್ರಾನಾಯ್ಕ್, ಬಾಬುನಾಯ್ಕ್, ಧರ್ಮನಾಯ್ಕ್, ಶಿವಮೂರ್ತಿ ನಾಯ್ಕ್, ನರಸಿಂಗ ನಾಯ್ಕ್ ಸೇರಿದಂತೆ ಈ ಸುನಾಮಿ ಗ್ಯಾಂಗ್'ನಲ್ಲಿ 30-40 ಜನರಿದ್ದಾರೆ. ಯಾರೇ ಪ್ರಶ್ನೆ ಮಾಡಿದರೂ, ಎದುರು ಮಾತಾಡಿದರೂ ರಾತ್ರಿ 12 ಗಂಟೆಗೆ ಬಂದು ಹಲ್ಲೆ ಮಾಡಿ ಹೋಗುತ್ತಾರೆ. ಇದು ಇವತ್ತಿಗೂ ನಡೆಯುತ್ತಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.

ಸಂತೋಷ್ ಲಾಡ್ ಒಳ್ಳೆಯ ಮನುಷ್ಯನೇ. ಆದರೆ, ಅವರ ಬೆಂಬಲಿಗರು ಲಾಡ್ ಅವರ ಅಧಿಕಾರ ದುರುಪಯೋಗ ಮಾಡಿಕೊಂಡು ಬಳ್ಳಾರಿಯಲ್ಲಿ ದಾಂಧಲೆ ನಡೆಸುತ್ತಿದ್ದಾರೆ. ಇವರ ಪುಂಡಾಟಗಳ ವಿರುದ್ಧ ಯಾರೂ ಉಸಿರೆತ್ತದಂತೆ ದರ್ಪ ತೋರುತ್ತಾರೆ. ಲಾಡ್ ಅವರು ಇಂಥದ್ದಕ್ಕೆ ಅವಕಾಶ ಕೊಡಬಾರದು ಎಂದು ಮಲ್ಲಿಕಾರ್ಜುನ್ ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ.

(ಫೋಟೋದಲ್ಲಿರುವುದು: ಸಚಿವ ಸಂತೋಷ್ ಲಾಡ್ ಮತ್ತು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್)