ನವದೆಹಲಿ (ಏ. 24):  100 ಶತಕೋಟಿ ಡಾಲರ್‌ನಷ್ಟು ಮಾರುಕಟ್ಟೆ ಬಂಡವಾಳ ಹೊಂದುವುದರೊಂದಿಗೆ ಟಾಟಾ ಸಮೂಹದ ಟಿಸಿಎಸ್ ಸಾಫ್ಟ್‌ವೇರ್ ಕಂಪನಿ ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. 

100 ಶತಕೋಟಿ ಡಾಲರ್ (6,80,912 ಕೋಟಿ ರು.) ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ದೈತ್ಯ ಕಂಪನಿ’ ಎಂದು ಗುರುತಿಸಲು ಅನೌಪಚಾರಿಕವಾಗಿ ಬಳಸುವ ಮಾನದಂಡ. 

ಟಿಸಿಎಸ್ ಕಂಪನಿ ಕಳೆದ 14 ತ್ರೈಮಾಸಿಕಗಳಲ್ಲಿ ಸತತವಾಗಿ ಭಾರಿ ಪ್ರಮಾಣದಲ್ಲಿ ಲಾಭ ಗಳಿಸುತ್ತಿದೆ. ಕಳೆದ ವಾರ ಪ್ರಕಟವಾದ  ತ್ರೈಮಾಸಿಕದಲ್ಲೂ ಶೇ.4.4 ರಷ್ಟು ನಿವ್ವಳ ಲಾಭ ಗಳಿಸಿದೆ. ಬಾಂಬೆ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಮತ್ತಷ್ಟು ಏರಿದ ಟಿಸಿಎಸ್ ಷೇರುಗಳ ಬೆಲೆ ಮಧ್ಯಂತರ ವಹಿವಾಟಿನನಲ್ಲಿ ಶೇ.4.39 ರಷ್ಟು ಏರಿ 3557 ರು. ತಲುಪಿತ್ತು.