ಇಬ್ಬರು ನನಗೆ ಸಮಾನ ಶತ್ರುಗಳು

ರಾಮನಗರ(ಫೆ.17): ಡಿಕೆಶಿ ಹಾಗೂ ಹೆಚ್'ಡಿಕೆ ನನಗೆ ದುರ್ಯೋಧನ ಹಾಗೂ ದುಶ್ಯಾಸನರಿದ್ದಂತೆ, ಇಬ್ಬರು ನನಗೆ ಸಮಾನ ಶತ್ರುಗಳು ಎಂದು ಮಾಜಿ ಸಂಸದೆ ಹಾಗೂ ಬಿಜೆಪಿ ಮುಖಂಡೆ ತೇಜಸ್ವಿನಿ ಶ್ರೀರಮೇಶ್ ಇಬ್ಬರು ನಾಯಕರ ವಿರುದ್ಧ ಕೆಂಡಕಾರಿದ್ದಾರೆ.ಇವರಿಬ್ಬರಲ್ಲಿ ದುರ್ಯೋಧನ, ದುಶ್ಯಾಸನ ಯಾರೆಂದು ಮಾಧ್ಯಮಗಳು ತೀರ್ಮಾನಿಸಲಿ ಎಂದಿದ್ದಾರೆ.

ಡಿಕೆಶಿ ವಿರುದ್ಧ ತಿರುಗಿ ಬಿದ್ದ ಕೆಪಿಸಿಸಿ ಸದಸ್ಯ

ರಾಮನಗರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಾಲಿ ಕೆಪಿಸಿಸಿ ಸದಸ್ಯ ಎ.ಮಂಜು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಇತ್ತೀಚಿಗಷ್ಟೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಗಡಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಹೆಚ್.ಸಿ. ಬಾಲಕೃಷ್ಣಗೆ ಟಿಕೆಟ್ ನೀಡಲಾಗುವುದು ಎಂದು ಮಾಗಡಿಯಲ್ಲಿ ಹೇಳಿಕೆ ನೀಡಿದ್ದರು. ಇಂದು ರಾಮನಗರ ತಾಲೂಕಿನ ಬಿಡದಿಯ ಕಂಚಗಾರನಹಳ್ಳಿ ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸಿದ್ದ ಮಂಜು ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಜೆಡಿಎಸ್ ಪಕ್ಷದ 7ಮಂದಿ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ. ಅವರಿಗೆ ಟಿಕೆಟ್ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್. ಡಿಕೆಶಿ ಹೇಳಿದಂತೆ ಪಕ್ಷ 7 ಮಂದಿಗೆ ಟಿಕೆಟ್ ನೀಡುವುದಿಲ್ಲ. ಒಂದು ವೇಳೆ ನೀಡಿದರೆ ನಾನು ನನ್ನ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತಿರ್ಮಾನ ತಗೆದುಕೊಳ್ಳುತ್ತೆನೆ ಎಂದು ತಿಳಿಸಿದ್ದಾರೆ.