ಈಗಿನ ಜೀವನ ಶೈಲಿ ಮತ್ತು ಆಹಾರಕ್ರಮಗಳು ಮತ್ತು ಇನ್ನಿತರೆ ಬಾಹ್ಯ ಅಂಶಗಳಿಂದ ಬಹುಷ ಫಲವತ್ತತೆ ಕಡಿಮೆಯಾಗಿ ಬಂಜೆತನ ಉಂಟಾಗುವ ಸಾದ್ಯತೆ ಇರಬಹುದು.
ಮದುವೆಯಾಗಿ ಕೆಲವು ವರ್ಷಗಳು ಕಳೆದರು ಮಕ್ಕಳಾಗಿಲ್ಲವೆಂದು ಬಹಳ ಮಂದಿ ಯೋಚಿಸುವವರಿದ್ದಾರೆ. ಈಗಿನ ಜೀವನ ಶೈಲಿ ಮತ್ತು ಆಹಾರಕ್ರಮಗಳು ಮತ್ತು ಇನ್ನಿತರೆ ಬಾಹ್ಯ ಅಂಶಗಳಿಂದ ಬಹುಷ ಫಲವತ್ತತೆ ಕಡಿಮೆಯಾಗಿ ಬಂಜೆತನ ಉಂಟಾಗುವ ಸಾದ್ಯತೆ ಇರಬಹುದು. ಇಲ್ಲಿದೆ ಬಂಜೆ ತನವನ್ನು ಗುರುತಿಸಬಹುದಾದ ಮಾಹಿತಿಗಳು.
ಬೊಜ್ಜು: 18ನೇ ವಯಸ್ಸಿಗೇ ಮಹಿಳೆಯರಲ್ಲಿ ಬೊಜ್ಜು ಉಂಟಾಗುವುದು ಬಂಜೆತನಕ್ಕೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವಾಗುವುದು ಅಂಡೋತ್ಪತ್ತಿ ಆಗುವುದನ್ನು ತಡೆಯುತ್ತದೆ. ಮತ್ತು ಪಾಲಿಸಿಸ್ಟಿಸ್ ಓವರಿ ಸಿಂಡ್ರೋಮ್ ನಿಂದಾಗಿಯೂ ಬಂಜೆತನ ಉಂಟಾಗುತ್ತದೆ.
ಕಡಿಮೆ ನಿದ್ರೆ: ಮಹಿಳೆಯರಲ್ಲಿ ನಿದ್ರೆಯ ಕೊರತೆ ಅವರ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆ ಮಾಡದ ಮಹಿಳೆಯರಲ್ಲಿ ಟನಿಯಮಿತ ಋತುಚಕ್ರ ಸಂಭವಿಸುತ್ತದೆ. ಇದು ಬಂಜೆತನಕ್ಕೆ ಕಾರಣವಾಗುತ್ತದೆ.
ಒತ್ತಡ: ಹೆಚ್ಚಿನ ಒತ್ತಡಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಬಂಜೆತನ ಹೆಚ್ಚುವ ಅಪಾಯವಿದೆ. ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೀಡಾದ ಮಹಿಳೆಯರಲ್ಲಿ ಬಂಜೆತನ ಉಂಟಾಗುವ ಪ್ರಮಾಣ ಅಧಿಕವಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ.
ಧೂಮಪಾನ: ಧೂಮಪಾನ ಮಾಡುವ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿದೆ. ಮತ್ತು ಧೂಮಪಾನ ಮಹಿಳೆಯರ ಗರ್ಭಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಧೂಮಪಾನ ಗರ್ಭಕೋಶವು ಒಣಗುವಂತೆ ಮಾಡುತ್ತದೆ ಇದರಿಂದ ಬಂಜೆತನ ಉಂಟಾಗುತ್ತದೆ.
ಒತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವಿಸುವುದು, ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ನಿದ್ರೆ ಮಾಡುವುದು ಇದರಿಂದ ಬಂಜೆತನದ ಅಪಾಯವನ್ನು ತಡೆಯಬಹುದು.
