ಮೋದಿಯನ್ನು ನಿಂದಿಸಿದ ಮಹಿಳೆಯ ಕುರಿತಾದ ಮತ್ತೊಂದು ಸತ್ಯ ಬಯಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.   The Indian Thing ಹೆಸರಿನ ಬಳಕೆದಾರರೊಬ್ಬರು ಈ ಮಹಿಳೆಯ ವಿಚಾರವಾಗಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್'ನಲ್ಲಿ ಈ ಮಹಿಳೆಯ ನಿಜ ಹೆಸರು ನಜ್ಮೀನ್ ಶೇಖ್(ನಜ್ಮೀನ್ ಹನೀಫ್) ಆಗಿದ್ದು, ಈಕೆ ಓರ್ವ ಬಾರ್ ಡಾನ್ಸರ್ ಎಂದು ತಿಳಿಸಲಾಗಿದೆ.

ನವದೆಹಲಿ(ಅ.16): ಕಪ್ಪು ಹಣ ತಡೆ ಯೋಜನೆ ಜಾರಿಗೊಳಿಸಿದ ಬಳಿಕ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋವೊಂದು ಭಾರೀ ಸುದ್ದಿ ಮಾಡಿತ್ತು. ವೈರಲ್ ಆದ ಆ ವಿಡಿಯೋದಲ್ಲಿ ತನ್ನ ಹಣೆಗೆ ತಿಲಕ ಹಚ್ಚಿಕೊಂಡಿದ್ದ ಮಹಿಳೆಯೊಬ್ಬಳು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅವಾಚ್ಯ ಶಬ್ಧಗಳನ್ನುಪಯೋಗಿಸಿ ನಿಂದಿಸಿದ್ದಳು. ನೋಡುಗರೆಲ್ಲರೂ ಈಕೆ ಓರ್ವ ಹಿಂದೂ ಯುವತಿ ಎಂದೇ ಭಾವಿಸಿದ್ದರು. ಇಷ್ಟೇ ವಿಡಿಯೋದಲ್ಲಿದ್ದ ದೃಶ್ಯಾವಳಿಗಳಲ್ಲಿ ಮಹಿಳೆಯ ಹಿಂದೆ ಮನೆಯೊಳಗಿನ ಬ್ಯಾಕ್'ಗ್ರೌಂಡ್ ಇದ್ದ ಕಾರಣ ಈಕೆ ಓರ್ವ ಗೃಹಿಣಿ ಹಾಗೂ ಕ್ಯಾಷ್ ಸಿಗದ ಕಾರಣ ಕೋಪಗೊಂಡಿದ್ದಾಳೆಂದು ಅಂದಾಜಿಸಲಾಗಿತ್ತು.

ಆದರೀಗ ಈ ಮಹಿಳೆಯ ಕುರಿತಾದ ಮತ್ತೊಂದು ಸತ್ಯ ಬಯಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. The Indian Thing ಹೆಸರಿನ ಬಳಕೆದಾರರೊಬ್ಬರು ಈ ಮಹಿಳೆಯ ವಿಚಾರವಾಗಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್'ನಲ್ಲಿ ಈ ಮಹಿಳೆಯ ನಿಜ ಹೆಸರು ನಜ್ಮೀನ್ ಶೇಖ್(ನಜ್ಮೀನ್ ಹನೀಫ್) ಆಗಿದ್ದು, ಈಕೆ ಓರ್ವ ಬಾರ್ ಡಾನ್ಸರ್ ಎಂದು ತಿಳಿಸಲಾಗಿದೆ.

ಕೃಪೆ: ದ ಇಂಡಿಯನ್ ಥಿಂಗ್

ಮಹಿಳೆಯ ವಿಡಿಯೋ ನೋಡಲು ಈ ಲಿಂಕನ್ನು ಕ್ಲಿಕ್ ಮಾಡಿ: https://www.youtube.com/watch?v=Ktw8ldfgCeg