ಸಂಬಂಧದ ಬಗ್ಗೆ ಬಾಯಿ ಮುಚ್ಚಲು ಪೋರ್ನ್ ಸ್ಟಾರ್'ಗೆ ಟ್ರಂಪ್ ಕಡೆಯಿಂದ ಲಕ್ಷಾಂತರ ಡಾಲರ್ ನೀಡಿಕೆ

Trumps lawyer arranged 130000 Dollar  to pay former porn star to stay quiet
Highlights

ಟ್ರಂಪ್'ನ ವಕೀಲರಾದ ಮೈಖೇಲ್ ಕೋಯೇನ್ ಪೋರ್ನ್ ತಾರೆ ಸ್ಟೆಫನಿ ಕ್ಲಿಫರ್ಡ್ ಅವರಿಗೆ 2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ನಡೆಯುವ ಕೆಲವೇ ವಾರಗಳ ಮುನ್ನ ಇಬ್ಬರ ನಡುವೆ ಇರುವ ಸಂಬಂಧದ ನಡುವೆ ಬಾಯಿ ಬಿಡದಿರಲು 1.30 ಲಕ್ಷ  ಡಾಲರ್ ನೀಡಲಾಗಿತ್ತು.

ವಾಷಿಂಗ್ಟ್'ನ್(ಜ.13): ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಇರುವ ಸಂಬಂಧವನ್ನು ಸಾರ್ವಜನಿಕವಾಗಿ ಬಾಯಿ ಬಿಡದಿರಲು ಪೋರ್ನ್ ಸ್ಟಾರ್ ಸ್ಟೆಫನಿ ಕ್ಲಿಫರ್ಡ್ ಅವರಿಗೆ 1.30 ಲಕ್ಷ  ಡಾಲರ್ ನೀಡಲಾಗಿತ್ತು ಎಂದು ವಾಲ್'ಸ್ಟ್ರೀಟ್ ಜರ್ನ'ಲ್ ವರದಿ ಮಾಡಿದೆ.   

ಟ್ರಂಪ್'ನ ವಕೀಲರಾದ ಮೈಖೇಲ್ ಕೋಯೇನ್ ಪೋರ್ನ್ ತಾರೆ ಸ್ಟೆಫನಿ ಕ್ಲಿಫರ್ಡ್ ಅವರಿಗೆ 2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ನಡೆಯುವ ಕೆಲವೇ ವಾರಗಳ ಮುನ್ನ ಇಬ್ಬರ ನಡುವೆ ಇರುವ ಸಂಬಂಧದ ನಡುವೆ ಬಾಯಿ ಬಿಡದಿರಲು 1.30 ಲಕ್ಷ  ಡಾಲರ್ ನೀಡಲಾಗಿತ್ತು. ಈ ಹಣವನ್ನು ಲಾಸ್ ಏಂಜಲೀಸ್'ನ ಸಿಟಿ ನ್ಯಾಷನಲ್ ಬ್ಯಾಂಕ್ ಮೂಲಕ ನೀಡಲಾಗಿತ್ತು  ಎಂದು ವರದಿಯಲ್ಲಿ ತಿಳಿಸಲಾಗಿದೆ.

2006ರಲ್ಲಿ ಕ್ಯಾಲಿಫೋರ್ನಿಯಾದ ಲೇಕ್ ತಾಹೋ'ದಲ್ಲಿ ಸ್ಟೆಫನಿ ಕ್ಲಿಫರ್ಡ್ ಅವರನ್ನು ಭೇಟಿಯಾಗಿದ್ದ ಇವರಿಬ್ಬರ ನಡುವೆ ಅಂದಿನಿಂದ ಸಂಬಂಧ ಬೆಳದಿದ್ದು. ತದ ನಂತರದ ಒಂದು ವರ್ಷದಲ್ಲಿ ಟ್ರಂಪ್ ಅವರು ಮೆಲನಿಯಾ ಅವರನ್ನು ಮೂರನೆ ಮದುವೆಯಾದರು.

ವರದಿ ನಿರಾಕರಿಸಿದ ಶ್ವೇತ ಭವನ

ಈ ರೀತಿಯ ವದಂತಿಗಳು 2011ರಿಂದಲೇ ಮರುಕಳಿಸುತ್ತಿವೆ. ಪತ್ರಿಕೆಯ ಸುದ್ದಿ ಸಂಪೂರ್ಣ ಸುಳ್ಳು. ಟ್ರಂಪ್ ಕೂಡ ವದಂತಿಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ' ಎಂದು ವಾಲ್'ಸ್ಟ್ರೀಟ್ ಪ್ರಕಟಿಸಿರುವ ವರದಿಯನ್ನು ಶ್ವೇತ ಭವನದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

loader