ಮೊಟರ್ ಸೈಕಲ್'ಗಳಿಗೆ ಅಧಿಕ ಸುಂಕ: ಭಾರತದ ವಿರುದ್ಧ ಟ್ರಂಪ್ ಕಿಡಿ

Trump threatens to impose reciprocal tax on motorcycles imported from India
Highlights

ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಕಳೆದ ವಾರ ಕರೆ ಮಾಡಿ ಮಾತನಾಡಿದಾಗ ಮೋಟರ್'ಸೈಕಲ್'ಗಳಿಗೆ ವಿಧಿಸಲಾಗುತ್ತಿರುವ ಸುಂಕವನ್ನು ಶೇ.75ರಿಂದ 50ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.

ವಾಷಿಂಗ್ಟ'ನ್(ಫೆ.14): ಅಮೆರಿಕಾದಲ್ಲಿ ತಯಾರಾಗುತ್ತಿರುವ ಮೋಟರ್ ಸೈಕಲ್'ಗಳಿಗೆ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಅತ್ಯಧಿಕ ಸುಂಕ ವಿಧಿಸುತ್ತಿರುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ.

ಕಾಂಗ್ರೆಸ್'ನ ಸದಸ್ಯರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಭಾರತವೂ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ನಮ್ಮ ದೇಶದಲ್ಲಿ ತಯಾರಾಗುವ ಹಾರ್ಲಿ ಡೇವಿಡ್'ಸನ್ ಒಳಗೊಂಡು ಹಲವು ಮೋಟಾರ್ ಸೈಕಲ್'ಗಳಿಗೆ ಅತ್ಯಧಿಕ ಸುಂಕ ವಿಧಿಸಲಾಗುತ್ತಿದೆ. ಇದು ಅತ್ಯಂತ ಖಂಡನೀಯ. ನಮ್ಮ ಉತ್ಪನ್ನಗಳನ್ನು ಕೊಳ್ಳಬಯಸುವ ಬೇರೆ ದೇಶಗಳೆ ನಮಗೆ ಸುಂಕ ವಿಧಿಸುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಕಳೆದ ವಾರ ಕರೆ ಮಾಡಿ ಮಾತನಾಡಿದಾಗ ಮೋಟರ್'ಸೈಕಲ್'ಗಳಿಗೆ ವಿಧಿಸಲಾಗುತ್ತಿರುವ ಸುಂಕವನ್ನು ಶೇ.75ರಿಂದ 50ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. ಆದರೆ ನಾವು ಇದನ್ನು ಶೂನ್ಯಕ್ಕೆ ಇಳಿಸಬೇಕೆಂದು ಬಯಸುತ್ತೇವೆ. ಏಕೆಂದರೆ ಬೇರೆ ದೇಶಗಳ ಮೋಟರ್ ಸೈಕಲ್'ಗಳಿಗೆ ನಾವು ವಿಧಿಸುವ ತೆರಿಗೆ ಕೇವಲ ಶೂನ್ಯ ಎಂದು'. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾವು ಕೂಡ ತೆರಿಗೆ ಹೇರಬೇಕಾಗುತ್ತದೆ ಎಂದು  ತಿಳಿಸಿದರು.

ಶ್ರೀಮಂತರು ಬಳಸುವ ಹಾರ್ಲಿ ಡೇವಿಡ್'ಸನ್ ಮೋಟರ್ ಸೈಕಲ್ ಬೆಲೆ ಭಾರತದಲ್ಲಿ 5 ಲಕ್ಷ ರೂ.ಗಳಿಂದ 55 ಲಕ್ಷ ರೂ.ಗಳವರೆಗೂ ಇದೆ.

loader