ಪ್ರತಿ ಚುನಾವಣೆಯಲ್ಲೂ ವೌಲಾನಗಳು ಮುಸ್ಲಿಂ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವಂತೆ ಫತ್ವಾ ಹೊರಡಿಸುತ್ತಾರೆ. ಅದೇ ರೀತಿಯಾಗಿ ಹಿಂದೂಗಳ ಪರ ನಿಲ್ಲುವ ಬಿಜೆಪಿಯನ್ನು ಬೆಂಬಲಿಸುವಂತೆ ಸಂಘಟನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ. ಈ ಹಿಂದೆ ಟ್ರಂಪ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದಾಗಲೂ ಹಲವು ಹಿಂದೂ ಪರ ಸಂಘಟನೆಗಳ ಅವರ ಪರ ಹೋಮ ಹವನ ನಡೆಸಿದ್ದವು.
ನವದೆಹಲಿ(ಫೆ.5): ಉಗ್ರವಾದ ಬೇರು ಹೊಂದಿರುವ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿದ ಬೆನ್ನಲ್ಲೇ, ಉತ್ತರಪ್ರದೇಶದಲ್ಲಿ ಯುವಕರ ಗುಂಪೊಂದು ಟ್ರಂಪ್ ಸೇನೆ ಸ್ಥಾಪಿಸಿದೆ. ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದೆ. ಇದಕ್ಕೆ ಮುನ್ನುಡಿಯೆಂಬಂತೆ ಉತ್ತರಪ್ರದೇಶದ ಪಿಲ್ಕುವಾ, ಹಾಪೂರ್‌ನಲ್ಲಿ ಇತ್ತೀಚಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ಅವರ ರಾಲಿಯಲ್ಲಿ ಈ ಸಂಘಟನೆಯ ಬ್ಯಾನರ್‌ಗಳು ಕಾಣಿಸಿಕೊಂಡಿವೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸಲು ಟ್ರಂಪ್ ಸೇನೆ ಸ್ಥಾಪಿಸಲಾಗಿದೆ. ಪ್ರತಿ ಚುನಾವಣೆಯಲ್ಲೂ ವೌಲಾನಗಳು ಮುಸ್ಲಿಂ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವಂತೆ ಫತ್ವಾ ಹೊರಡಿಸುತ್ತಾರೆ. ಅದೇ ರೀತಿಯಾಗಿ ಹಿಂದೂಗಳ ಪರ ನಿಲ್ಲುವ ಬಿಜೆಪಿಯನ್ನು ಬೆಂಬಲಿಸುವಂತೆ ಸಂಘಟನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ. ಈ ಹಿಂದೆ ಟ್ರಂಪ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದಾಗಲೂ ಹಲವು ಹಿಂದೂ ಪರ ಸಂಘಟನೆಗಳ ಅವರ ಪರ ಹೋಮ ಹವನ ನಡೆಸಿದ್ದವು.
