ವಾಷಿಂಗ್ಟನ್(ಜು.23): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿಸೋದು ಖುದ್ದು ಅಮೆರಿಕಕ್ಕೂ ಕಷ್ಟವಾಗುತ್ತಿದೆ. ಟ್ರಂಪ್ ಅವರ ಕ್ಷಣಕ್ಕೊಂದು ಹೇಳಿಕೆ, ಕ್ಷಣಕ್ಕೊಂದು ವಿಚಿತ್ರ ನಿರ್ಧಾರ ವೈಟ್’ಹೌಸ್’ನ್ನು ದಿಗಿಲು ಬಡಿಸುತ್ತಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದೀಗ ಅಮೆರಿಕ ಪ್ರವಾಸದಲ್ಲಿದ್ದಾರೆ. ವಿವಾದ ಸೃಷ್ಟಿಸುವಲ್ಲಿ ಟ್ರಂಪ್ ಕಿರಿಯ ಸಹೋದರರಂತಿರುವ ಇಮ್ರಾನ್ ಖಾನ್, ಅಮೆರಿಕದಲ್ಲೂ ಎಡವಟ್ಟು ಮಾಡಿಕೊಂಡು ಓಡಾಡುತ್ತಿದ್ದಾರೆ.

ಇತ್ತ ಟ್ರಂಪ್ ಕೂಡ ಅಧಿಕೃತ ಪತ್ರಿಕಾಗೋಷ್ಠಿಯಲ್ಲೇ ಪಾಕಿಸ್ತಾನ ವರದಿಗಾರರನ್ನು ಹೊಗಳಿ ಅಮೆರಿಕಕ್ಕೆ ಮತ್ತೆ ಮುಜುಗರ ತಂದಿತ್ತಿದ್ದಾರೆ.

ಹೌದು, ಟ್ರಂಪ್-ಇಮ್ರಾನ್ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ, ತಮಗೆ ಅಮೆರಿಕದ ಪತ್ರಕರ್ತರಿಗಿಂತ ಪಾಕಿಸ್ತಾನದ ಪತ್ರಕರ್ತರು ಇಷ್ಟ ಎಂದು ಟ್ರಂಪ್ ಹೇಳಿದ್ದಾರೆ. ತಮಗೆ ಕೆಲವು ಪಾಕಿಸ್ತಾನಿ ಪತ್ರಕರ್ತರ ಪರಿಚಯವಿದ್ದು, ಅಂತವರು ಕೆಲವರಾದರೂ ಅಮೆರಿಕದಲ್ಲಿ ಇರಬೇಕಿತ್ತು ಎಂದು ಟ್ರಂಪ್ ಹೇಳಿದ್ದಾರೆ.