ಟ್ರಂಪ್‌ ಕ್ರೂರ ನೀತಿ ಬಲೆಯಲ್ಲಿ ಜೈಲು ಸೇರಿದ ಭಾರತೀಯರು

Trump's detain immigrant families Law 50 Indian Jailed
Highlights

ದೇಶದೊಳಕ್ಕೆ ಅಕ್ರಮವಾಗಿ ಒಳನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಗೊಳಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರದ ನೀತಿಯ ಬಲೆಯಲ್ಲಿ 50ಕ್ಕೂ ಹೆಚ್ಚು ಭಾರತೀಯರೂ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಪೈಕಿ ಹಲವು ಪೋಷಕರು ತಮ್ಮ ಮಕ್ಕಳಿಂದ ದೂರವಾಗಿ ಜೈಲು ಸೇರಿದ್ದಾರೆ ಎನ್ನಲಾಗಿದೆ.

ವಾಷಿಂಗ್ಟನ್‌ :  ದೇಶದೊಳಕ್ಕೆ ಅಕ್ರಮವಾಗಿ ಒಳನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಗೊಳಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರದ ನೀತಿಯ ಬಲೆಯಲ್ಲಿ 50ಕ್ಕೂ ಹೆಚ್ಚು ಭಾರತೀಯರೂ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಪೈಕಿ ಹಲವು ಪೋಷಕರು ತಮ್ಮ ಮಕ್ಕಳಿಂದ ದೂರವಾಗಿ ಜೈಲು ಸೇರಿದ್ದಾರೆ ಎನ್ನಲಾಗಿದೆ.

ಅಕ್ರಮ ವಲಸೆ ಸಮಸ್ಯೆ ತಡೆಗೆ ಹಲವು ಭರವಸೆಗಳನ್ನು ಚುನಾವಣೆಪೂರ್ವದಲ್ಲಿ ನೀಡಿದ್ದ ಟ್ರಂಪ್‌ ಅವರು, ಕಳೆದ ಮೇನಲ್ಲಿ ಶೂನ್ಯ ಸಹಿಷ್ಣುತೆಯ ವಲಸೆ ನೀತಿಯೊಂದನ್ನು ಜಾರಿಗೆ ತಂದಿದ್ದಾರೆ. ಯಾರೇ ಅಮೆರಿಕ ಗಡಿಯೊಳಕ್ಕೆ ಅಕ್ರಮವಾಗಿ ನುಸುಳಿದರೆ, ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತದೆ. ಜೈಲಿಗೆ ತಳ್ಳಲಾಗುತ್ತದೆ. ಅವರ ಜತೆಯಲ್ಲಿ ಮಕ್ಕಳಿದ್ದರೆ, ಪೋಷಕರಿಂದ ಪ್ರತ್ಯೇಕಿಸಿ, ನಿರಾಶ್ರಿತರ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಈ ಪೈಕಿ 50ಕ್ಕೂ ಹೆಚ್ಚು ಭಾರತೀಯರೂ ಸೇರಿದ್ದಾರೆ ಎನ್ನಲಾಗಿದೆ. ಇವರೆನ್ನಲ್ಲಾ ಸದ್ಯ ಓರೇಗಾಂವ್‌ನ ಯ್ಯಾಮ್‌ಹಿಲ್‌ ಕೌಂಟಿಯ ಜೈಲೊಂದರಲ್ಲಿ ಇಡಲಾಗಿದೆ. ಈ ಪೈಕಿ ಕೆಲವರು ಹಿಂದಿ ಮತ್ತು ಪಂಜಾಬಿ ಭಾಷಿಕರು ಎಂದು ಗೊತ್ತಾಗಿದೆ.

ಈ ಹಿಂದೆ ಇದ್ದ ನಿಯಮಗಳ ಪ್ರಕಾರ, ಅಕ್ರಮ ವಲಸಿಗರನ್ನು ಅವರ ಮಕ್ಕಳ ಸಮೇತ ವಶಕ್ಕೆ ಪಡೆಯಲಾಗುತ್ತಿತ್ತು. ಆಶ್ರಯ ಕೋರಿ ಅವರು ಈ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು. ಇಲ್ಲವಾದಲ್ಲಿ ಸರ್ಕಾರವೇ ಅವರವರ ದೇಶಕ್ಕೆ ವಾಪಸ್‌ ಅಟ್ಟುತ್ತಿತ್ತು.

loader