ಟ್ರಂಪ್ ಗೆ ಇದೆಯಂತೆ ಈ ಕೆಟ್ಟ ಅಭ್ಯಾಸ

First Published 12, Jun 2018, 11:23 AM IST
Trump repeatedly tears up official documents
Highlights

ಮನುಷ್ಯ ಎಷ್ಟೇ ಸ್ಥಾನಕ್ಕೇರಿದರೂ, ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದು ಅಷ್ಟುಸುಲಭವಲ್ಲ. ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಡೀ ಜಗತ್ತಿಗೆ ದೊಡ್ಡಣ್ಣ ಎನಿಸಿದರೂ, ಅವರಿಗೆ ಪೇಪರ್‌ಗಳನ್ನು ಹರಿಯುವ ಅಭ್ಯಾಸವಿದೆಯಂತೆ. 

ವಾಷಿಂಗ್ಟನ್‌: ಮನುಷ್ಯ ಎಷ್ಟೇ ಸ್ಥಾನಕ್ಕೇರಿದರೂ, ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದು ಅಷ್ಟುಸುಲಭವಲ್ಲ. ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಡೀ ಜಗತ್ತಿಗೆ ದೊಡ್ಡಣ್ಣ ಎನಿಸಿದರೂ, ಅವರಿಗೆ ಪೇಪರ್‌ಗಳನ್ನು ಹರಿಯುವ ಅಭ್ಯಾಸವಿದೆಯಂತೆ. 

ಈ ಅಭ್ಯಾಸದಿಂದಾಗಿ ಅವರು ತಮ್ಮ ಕಚೇರಿಯಲ್ಲಿನ ಕಡತಗಳ ಪುಟಗಳನ್ನೂ ಹರಿದು ಹಾಕುತ್ತಿರುತ್ತಾರೆ. ಇದು ವೈಟ್‌ಹೌಸ್‌ನಲ್ಲಿ ಕಡತಗಳನ್ನು ಕಾಪಾಡುವವರನ್ನು ದೊಡ್ಡ ಸಮಸ್ಯೆಯಾಗಿ ಕಾಡಿದೆ. 

ಚೂರುಗಳಾಗಿ ಹರಿದ ಕಡತಗಳನ್ನು ಮರು ಜೋಡಿಸುವುದೂ ಈಗ ಅವರಿಗೆ ಒಂದು ಕೆಲಸವಾಗಿದೆ. ಅಧ್ಯಕ್ಷೀಯ ದಾಖಲೆಗಳ ಕಾಯ್ದೆ ಪ್ರಕಾರ, ಅಧ್ಯಕ್ಷರು ಮುಟ್ಟುವ ಯಾವುದೇ ದಾಖಲೆಗಳಾಗಲಿ ಐತಿಹಾಸಿಕ ದಾಖಲೆಯಾಗಿ ಅವುಗಳನ್ನು ರಾಷ್ಟ್ರೀಯ ದಾಖಲೆಗಳ ವಿಭಾಗದಲ್ಲಿ ಕಾಪಾಡಬೇಕು.

loader