ಅಮೆರಿಕದಲ್ಲಿ ಕೆಲಸ ಮಾಡುವ ಕನಸಿದೆಯೇ..? ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ..!

First Published 27, Jan 2018, 10:54 AM IST
Trump Proposes May Benefit Indian
Highlights

ಹಲವು ದಶಕಗಳಿಂದ ಅಮೆರಿಕದಲ್ಲಿ ಕೆಲಸ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುವ ಭಾರತೀಯ ಮಾಹಿತಿ ತಂತ್ರಜ್ಞಾನದ ವೃತ್ತಿಪರರು ಗ್ರೀನ್ ಕಾರ್ಡ್ ಪಡೆಯಲು ಅನುವಾಗ ಬಹುದಾದ ವೀಸಾ ಕಾನೂನು ಜಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.

ವಾಷಿಂಗ್ಟನ್: ಹಲವು ದಶಕಗಳಿಂದ ಅಮೆರಿಕದಲ್ಲಿ ಕೆಲಸ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುವ ಭಾರತೀಯ ಮಾಹಿತಿ ತಂತ್ರಜ್ಞಾನದ ವೃತ್ತಿಪರರು ಗ್ರೀನ್ ಕಾರ್ಡ್ ಪಡೆಯಲು ಅನುವಾಗ ಬಹುದಾದ ವೀಸಾ ಕಾನೂನು ಜಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.

ಈ ಸಂಬಂಧ ಹೆಚ್ಚು ನುರಿತ ಕೆಲಸಗಾರರ ಪ್ರಾಶಸ್ತ್ಯ ಕಡಿಮೆಗೊಳಿಸುವ ವೀಸಾ ಲಾಟರಿ ವ್ಯವಸ್ಥೆ ರದ್ದುಗೊಳಿಸಿ ಕೌಶಲ್ಯ ಕೆಲಸಗಾರಿಗೆ ವಿಸಾ ಹೆಚ್ಚಿಸುವ ಮಸೂದೆಯನ್ನು ರಿಪಬ್ಲಿಕನ್ ಪಕ್ಷದ ಇಬ್ಬರು ಸದಸ್ಯರು ಸೆನೆಟ್‌ನಲ್ಲಿ ಮಂಡಿಸಿದ್ದಾರೆ.

ಈ ಕಾನೂನು ರೂಪುಗೊಂಡಲ್ಲಿ, ಭಾರತದ ಅತಿಹೆಚ್ಚು ನುರಿತ ಕೆಲಸಗಾರರಿಗೆ ನೀಡಲಾಗುವ ಗ್ರೀನ್‌ಕಾರ್ಡ್ ಬ್ಯಾಕ್ ಲಾಗ್‌ಗಳ ಸಂಖ್ಯೆ ಕಡಿಮೆಗೊಳ್ಳಲಿದೆ. ‘ಲಾಟರಿ ಮತ್ತು ಪುನಃ ನೀಡಲಾಗುವ ವೀಸಾಗಳನ್ನು ರದ್ದುಪಡಿಸುವ ಮೂಲಕ ಕುಟುಂಬ ಆಧಾರಿತ ಬ್ಯಾಕ್‌ಲಾಗ್ ಮತ್ತು ಹೆಚ್ಚು ನುರಿತ ನೌಕರನ ಬ್ಯಾಕ್‌ಲಾಗ್ ವೀಸಾ ನೀಡಿಕೆಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ,’ ಎಂದು ಟ್ರಂಪ್ ಆಡಳಿತ ತಿಳಿಸಿದೆ.

loader