ವಾಷಿಂಗ್ಟನ್(ಸೆ.26): ವಿಶ್ವದ ನಾಗರಿಕತೆಗೆ ಹಾಗೂ ಅಮೆರಿಕಾದ ಸಂಸ್ಕೃತಿಗೆ ಹಿಂದೂ ಸಮುದಾಯ ಗಣನೀಯ ಕೊಡುಗೆ ಸಲ್ಲಿಸಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಹಿಂದೂ ಸಮುದಾಯವನ್ನು ಕೊಂಡಾಡಿದ್ದಾರೆ.

Add Asianetnews Kannada as a Preferred SourcegooglePreferred

ಮುಂದಿನ ತಿಂಗಳು ನ್ಯೂಜರ್ಸಿಯಲ್ಲಿ ಇಂಡಿಯನ್ - ಅಮೆರಿಕನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿರುವ ಟ್ರಂಪ್, ಇದು ಇಸ್ಲಾಮಿಕ್ ಭಯೋತ್ಪಾದನೆಯಿಂದ ಜಾಗತಿಕ ಸಂತ್ರಸ್ಥರಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಹಿಂದೂ ಸಮುದಾಯವು ಅಮೆರಿಕಾ ಸಂಸ್ಕೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದೆ. ಕೌಟುಂಬಿಕ ಮೌಲ್ಯ, ಶ್ರಮ ಜೀವನ, ಕಠಿಣ ವಿದೇಶಾಂಗ ನೀತಿಯನ್ನು ಪಾಲಿಸುವ ಮೂಲಕ ಅಮೆರಿಕಾವನ್ನು ಇನ್ನಷ್ಟು ಬಲಿಷ್ಟಗೊಳಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ಅಕ್ಟೋಬರ್ 15 ರಂದು ನ್ಯೂಜರ್ಸಿಯಲ್ಲಿ ನಡೆಯಲಿರುವ ಇಂಡಿಯನ್- ಅಮೇರಿಕನ್ ಕಾರ್ಯಕ್ರಮಕ್ಕೆ ಹಾಜರಾಗುವಂತೆ 24 ಸೆಕೆಂಡ್'ಗಳ ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.