ಮಾಜಿ ಮನೆಕೆಲಸದಾಕೆಗೂ ಮಕ್ಕಳ ಕರುಣಿಸಿದ್ದ ಟ್ರಂಪ್‌: ಆರೋಪ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Aug 2018, 1:10 PM IST
Trump Had Relationship With Ex Housekeeper Alligation
Highlights

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಾಜಿ ಹೌಸ್‌ಕೀಪರ್‌ ಜೊತೆಗೂ ಅಕ್ರಮ ಸಂಬಂಧವಿತ್ತು. ಆಕೆಗೆ ಟ್ರಂಪ್‌ರಿಂದ ಮಗು ಕೂಡ ಆಗಿತ್ತು ಎಂದು ಟ್ರಂಪ್‌ ದ್ವಾರಪಾಲಕ ಆರೋಪಿಸಿದ್ದಾರೆ. 

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಾಜಿ ಹೌಸ್‌ಕೀಪರ್‌ ಜೊತೆಗೂ ಅಕ್ರಮ ಸಂಬಂಧವಿತ್ತು. ಆಕೆಗೆ ಟ್ರಂಪ್‌ರಿಂದ ಮಗು ಕೂಡ ಆಗಿತ್ತು ಎಂದು ಟ್ರಂಪ್‌ ವಲ್ಡ್‌ರ್‍ ಟವರ್‌ನ ಮಾಜಿ ದ್ವಾರಪಾಲಕರೊಬ್ಬರು ಆಪಾದಿಸಿದ್ದಾರೆ. 

ಈ ವಿಷಯವನ್ನು ಯಾರೊಂದಿಗೂ ಚರ್ಚಿಸಕೂಡದು ಎಂದು ಮಾಜಿ ದ್ವಾರಪಾಲಕ ಡಿನೊ ಸಾಜುದ್ದೀನ್‌, ಅಮೆರಿಕನ್‌ ಮೀಡಿಯಾ ಸಂಸ್ಥೆ ಜೊತೆ ಒಪ್ಪಂದ ಹೊಂದಿದ್ದರಿಂದ ಇಷ್ಟುದಿನ ಅವರಿಗೆ ಈ ವಿಷಯ ಬಹಿರಂಗ ಪಡಿಸಲು ಸಾಧ್ಯವಾಗಿರಲಿಲ್ಲ. 

ಇತ್ತೀಚೆಗೆ ಒಪ್ಪಂದ ಮುಗಿದಿರುವುದರಿಂದ ಈಗ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆ ಎಂದು ಅವರ ನ್ಯಾಯವಾದಿ ಮಾರ್ಕ್ ಹೆಲ್ಡ್‌ ಹೇಳಿದ್ದಾರೆ.

loader