ಎಚ್‌-1ಬಿ ವೀಸಾ ಹೊಂದಿರುವವರ ಪತ್ನಿಯಂದಿರು  ಅಮೆರಿಕದಲ್ಲಿ ಉದ್ಯೋಗ ಮಾಡುವುದಕ್ಕೆ ಅನುಮತಿ ನೀಡಿ ಒಬಾಮಾ ಸರ್ಕಾರ ಆದೇಶ ಹೊರಡಿಸಿತ್ತು. ಇದರ ವಿರುದ್ಧ ‘ಅಮೆರಿಕ ಉದ್ಯೋಗ ಉಳಿಸಿ' ಎಂಬ ಸಂಘಟನೆ ಕೋರ್ಟ್‌ ಮೊರೆ ಹೋಗಿತ್ತು. ಜಿಲ್ಲಾ ನ್ಯಾಯಾಲಯ ಒಬಾಮಾ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು.

ವಾಷಿಂಗ್ಟನ್‌(ಮಾ.09):  ಎಚ್‌-1ಬಿ ವೀಸಾದಡಿ ಅಮೆರಿಕದಲ್ಲಿ ನೆಲೆಯೂರಿರುವ ಭಾರತೀಯರ ಪತ್ನಿಯಂದಿರಿಗೂ ಉದ್ಯೋಗ ಮಾಡಲು ಅನುವು ಮಾಡಿಕೊಡುವ ಕುರಿತಂತೆ ಪ್ರತಿಕ್ರಿಯಿಸಲು ಡೊನಾಲ್ಡ್‌ ಟ್ರಂಪ್‌ ಸರ್ಕಾರ 60 ದಿನಗಳ ಕಾಲಾವಕಾಶ ಕೋರಿದೆ. ಈ ಸಂಬಂಧ ಅಮೆರಿಕದ ಅಪೀಲುಗಳ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಎಚ್‌-1ಬಿ ವೀಸಾ ಹೊಂದಿರುವವರ ಪತ್ನಿಯಂದಿರು ಅಮೆರಿಕದಲ್ಲಿ ಉದ್ಯೋಗ ಮಾಡುವುದಕ್ಕೆ ಅನುಮತಿ ನೀಡಿ ಒಬಾಮಾ ಸರ್ಕಾರ ಆದೇಶ ಹೊರಡಿಸಿತ್ತು. ಇದರ ವಿರುದ್ಧ ‘ಅಮೆರಿಕ ಉದ್ಯೋಗ ಉಳಿಸಿ' ಎಂಬ ಸಂಘಟನೆ ಕೋರ್ಟ್‌ ಮೊರೆ ಹೋಗಿತ್ತು. ಜಿಲ್ಲಾ ನ್ಯಾಯಾಲಯ ಒಬಾಮಾ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು.

ಇದರ ವಿರುದ್ಧ ವಾಷಿಂಗ್ಟನ್‌ ಡೀಸಿ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿದೆ. ಒಂದು ವೇಳೆ ಪತ್ನಿಯರು ಕೆಲಸ ಮಾಡಬಾರದು ಎಂದು ಟ್ರಂಪ್‌ ಸರ್ಕಾರ ನಿಲುವು ತಾಳಿದರೆ ಭಾರತೀಯರಿಗೆ ತೊಂದರೆಯಾಗಲಿದೆ. ಇದೇ ವೇಳೆ ಎಚ್‌-1ಬಿ ವೀಸಾ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಅಧ್ಯಕ್ಷ ಟ್ರಂಪ್‌ ಉದ್ದೇಶಿಸಿದ್ದಾರೆ . ಎಚ್‌-1ಬಿ ವಿಸಾವನ್ನು ವಿವಿಧ ಸೇವೆಗಳಲ್ಲಿ ಅತ್ಯಂತ ನುರಿತರಿಗೆ ಮಾತ್ರವೇ ನೀಡಲಾಗುವುದು ಎಂದು ಟ್ರಂಪ್‌ ಆಪ್ತ ಸಂಸದ ಹೇಳಿದ್ದಾರೆ.