ತಮ್ಮದೇ ಆದ ವಿಚಿತ್ರ ನಡವಳಿಕೆಯಿಂದ ಸುದ್ದಿಯಾಗುವ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೆ ಗುರಿಯಾಗಿದ್ದಾರೆ.  

ವಾಷಿಂಗ್ಟನ್ : ತಮ್ಮದೇ ಆದ ವಿಚಿತ್ರ ನಡವಳಿಕೆಯಿಂದ ಸುದ್ದಿಯಾಗುವ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೆ ಗುರಿಯಾಗಿದ್ದಾರೆ. 

ಟ್ರಂಪ್ ಗುರುವಾರ ಏರ್ ಫೋರ್ಸ್ ಒನ್ ವಿಮಾನ ಏರುವಾಗ ಶೂಗೆ ಟಾಯ್ಲೆಟ್ ಪೇಪರ್ ಅಂಟಿತ್ತು. ಆದರೆ, ಅದನ್ನು ಗಮನಿಸದೇ ಟ್ರಂಪ್ ವಿಮಾನ ಏರಿದ್ದಾರೆ. ಈ ಘಟನೆ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 

ಆದರೆ, ಕಾಲಿಗೆ ಅಂಟಿಕೊಂಡಿದ್ದು ಟಾಯ್ಲೆಟ್ ಪೇಪರ್ ಹೌದೇ ಎಂದು ದೃಢಪಟ್ಟಿಲ್ಲ. ಸಾಮಾಜಿಕ ಜಾಲತಾಣಿಗರು ಮಾತ್ರ ಸಿಕ್ಕಿದ್ದೇ ಅವಕಾಶ ಎಂದು ತರಹೇವಾರಿ ಕಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ.