ಇತ್ತೀಚೆಗೆ ರಾಜ್ಯದಲ್ಲಿ ಪ್ಲಾಸ್ಟಿಕ್ ಆಹಾರ ಪದಾರ್ಥಗಳ ಹಾವಳಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಸಕ್ಕರೆ ಆಯ್ತು, ಮೊಟ್ಟೆ ಆಯ್ತು, ಇದೀಗ ಪ್ಲಾಸ್ಟಿಕ್ ಅಕ್ಕಿ ದಂಧೆ ಶುರುವಾಗಿದೆ.

ಬೆಂಗಳೂರು(ಜೂ.09): ಇತ್ತೀಚೆಗೆ ರಾಜ್ಯದಲ್ಲಿ ಪ್ಲಾಸ್ಟಿಕ್ ಆಹಾರ ಪದಾರ್ಥಗಳ ಹಾವಳಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಸಕ್ಕರೆ ಆಯ್ತು, ಮೊಟ್ಟೆ ಆಯ್ತು, ಇದೀಗ ಪ್ಲಾಸ್ಟಿಕ್ ಅಕ್ಕಿ ದಂಧೆ ಶುರುವಾಗಿದೆ.

ಅನ್ನ ಮಾಡಿದ ಅಕ್ಕಿ ಬಾಲಿನ ರೀತಿ ಬೌನ್ಸ್ ಆಗುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ಪ್ಲಾಸ್ಟಿಕ್ ಮೊಟ್ಟೆಗಳ ಸಾಗಣೆ ಮಾಡ್ತಿದ್ದ ಟೆಂಪೋ ಒಂದು ಸಿಕ್ಕಿಬಿದ್ದಿದೆ. ಮುನಿದೊರೆ ಎಂಬಾತ ನೈಸ್​ ರಸ್ತೆ ಬಳಿ ಇರುವ ಗೊಲ್ಲರಹಳ್ಳಿ ಯಲ್ಲಿ 5 ರೂ. ಮೌಲ್ಯದ ಮೊಟ್ಟೆಗಳನ್ನು ಕೇವಲ 2 ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಆತ ಸಾಗಣೆ ಮಾಡುತ್ತಿದ್ದ ಮೊಟ್ಟೆಗಳು ಪ್ಲಾಸ್ಟಿಕ್ ಎಂದು ಆರೋಪಿಸಿ, ಟೆಂಪೋವನ್ನು ತಡೆದು ಧ್ವಂಸಗೊಳಿಸಿದ್ದಾರೆ.

ಅಷ್ಟೇ ಅಲ್ಲದೇ ಸ್ಥಳೀಯರು ಆ ಮೊಟ್ಟೆಗಳನ್ನ ಒಡೆದು. ಸ್ಥಳದಲ್ಲಿಯೇ ಆಮ್ಲೆಟ್ ಮಾಡಿ ಪರೀಕ್ಷಿಸಿದ್ದಾರೆ. ಟೆಂಪೋದಲ್ಲಿದ್ದ ಮೊಟ್ಟೆಗಳನ್ನೆಲ್ಲ ರಸ್ತೆಗೆ ಎಸೆದಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.