ಕ್ರಿಸ್`ಮಸ್ ಸಂಭ್ರಮದಲ್ಲಿ ಜರ್ಮನಿಯ ಬರ್ಲಿನ್ ಜನತೆಗೆ ಸೋಮವಾರ ಅಕ್ಷರಶಃ ಆಘಾತವಾಗಿದೆ. ಕಪ್ಪು ವರ್ಣದ ದೊಡ್ಡ ಟ್ರಕ್ ಒಂದು ಏಕಾಏಕಿ ಕ್ರಿಸ್ ಮಸ್ ಮಾರುಕಟ್ಟೆಗೆ ನುಗ್ಗಿದ್ದು, 12 ಮಂದಿ ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಹೀಗಾಗಿ, ಕ್ರಿಸ್ ಮಸ್ ರಜೆಯ ಸಂಭ್ರಮದಲ್ಲಿದ್ದ ಬರ್ಲಿನ್`ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.  

ಬರ್ಲಿನ್(ಡಿ.20): ಕ್ರಿಸ್`ಮಸ್ ಸಂಭ್ರಮದಲ್ಲಿ ಜರ್ಮನಿಯ ಬರ್ಲಿನ್ ಜನತೆಗೆ ಸೋಮವಾರ ಅಕ್ಷರಶಃ ಆಘಾತವಾಗಿದೆ. ಕಪ್ಪು ವರ್ಣದ ದೊಡ್ಡ ಟ್ರಕ್ ಒಂದು ಏಕಾಏಕಿ ಕ್ರಿಸ್ ಮಸ್ ಮಾರುಕಟ್ಟೆಗೆ ನುಗ್ಗಿದ್ದು, 12 ಮಂದಿ ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಹೀಗಾಗಿ, ಕ್ರಿಸ್ ಮಸ್ ರಜೆಯ ಸಂಭ್ರಮದಲ್ಲಿದ್ದ ಬರ್ಲಿನ್`ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಮೀಪದಲ್ಲಿದ್ದ ವ್ಯಕ್ತಿಯೊಬ್ಬನನ್ನ ಬಂಧಿಸಿರುವ ಪೊಲಿಸರು ವಿಚಾರಣೆ ನಡೆಸಿದ್ಧಾರೆ. ಪಾಲಿಶ್ ಲೈಸೆನ್ಸ್ ಪ್ಕೇಟ್ ಇರುವ ಟ್ರಕ್`ನಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಇದೊಂದು ಭಯೋತ್ಪಾದಕ ದಾಳಿ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.