ಲಾರಿ ಚಾಲಕಗೆ 6.5 ಲಕ್ಷ ರು.ದಂಡ: ಹೊಸ ಮೋಟಾರು ಕಾಯ್ದೆ ಜಾರಿಗೆ ಮುನ್ನವೇ ದಂಡ!

ಒಡಿಶಾದಲ್ಲಿ ಲಾರಿ ಚಾಲಕಗೆ 6.5 ಲಕ್ಷ ರು.ದಂಡ| ಹೊಸ ಮೋಟಾರು ಕಾಯ್ದೆ ಜಾರಿಗೆ ಮುನ್ನವೇ ದಂಡ| ವಿವಿಧ ನಿಯಮ ಉಲ್ಲಂಘಿಸಿದ್ದಕ್ಕೆ ಭಾರೀ ದಂಡ ಹೇರಿಕೆ

Truck owner fined Rs 6 53 lakh for violating traffic rules in Odisha

ಭುವನೇಶ್ವರ್‌[ಸೆ.15]: ನೂತನ ಮೋಟಾರು ವಾಹನ ಕಾಯ್ದೆ ಜಾರಿ ಬಳಿಕ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ, ಈ ಕಾಯ್ದೆ ಜಾರಿಗೆ ಕೆಲ ದಿನಗಳ ಮೊದಲೇ ಒಡಿಶಾದಲ್ಲಿ ಲಾರಿ ಚಾಲಕರೊಬ್ಬರಿಗೆ ಬರೋಬ್ಬರಿ ಆರೂವರೆ ಲಕ್ಷ ರುಪಾಯಿ ದಂಡ ವಿಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್‌ 10 ರಂದು ನಾಗಾಲ್ಯಾಂಡ್‌ ನೋಂದಣಿಯ ಲಾರಿಯೊಂದಕ್ಕೆ ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಭಾಲ್‌ಪುರ ಆರ್‌ಟಿಒ ಅಧಿಕಾರಿಗಳು 6.53 ಲಕ್ಷ ದಂಡ ವಿಧಿಸಿದ್ದಾರೆ. ಒಡಿಶಾ ಮೋಟಾರು ವಾಹನ ಕಾಯ್ದೆಯಡಿ ಈ ದಂಡ ವಿಧಿಸಲಾಗಿದೆ.

2014 ಜು.21 ರಿಂದ 2019 ಸೆ.30ರ ವರೆಗೆ ಒಟ್ಟು 5 ವರ್ಷ ರಸ್ತೆ ತೆರಿಗೆ ಪಾವತಿಸದಿದ್ದಕ್ಕೆ 6,40,500ರು. ಸೇರಿದಂತೆ ದಾಖಲೆ ಹಾಗೂ ವಿಮೆ ರಹಿತ ಚಾಲನೆ, ಮಾಲಿನ್ಯ ಹಾಗೂ ಪರವಾನಿಗೆ ನಿಯಮ ಉಲ್ಲಂಘಟನೆ ಹಾಗೂ ಗೂಡ್ಸ್‌ ವಾಹನದಲ್ಲಿ ಪ್ಯಾಸೆಂಜರ್‌ಗಳನ್ನು ಸಾಗಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಸೆ.1 ರಿಂದ ನೂತನ ಮೋಟಾರು ವಾಹನ ಕಾಯ್ದೆ ದೇಶಾದ್ಯಂತ ಜಾರಿಗೆ ಬಂದಿತ್ತು.

Latest Videos
Follow Us:
Download App:
  • android
  • ios