ಕಿಶನ್‌ಗಢ್‌ :  ರಾಜಸ್ಥಾನದ ಕಿಶನ್‌ಗಢ್‌ನ ಟೋಲ್ ಪ್ಲಾಜಾದಲ್ಲಿ, ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್ ಬೂತ್‌ಗೆ ನುಗ್ಗಿದೆ. ಏಕಾಏಕಿ ಟೋಲ್ ಬೂತ್‌ಗೆ ನುಗ್ಗಿದ್ದು ಅಂತಿಂಥ ಲಾರಿಯಲ್ಲ. 

ಬಿಯರ್ ಬಾಟಲು ತುಂಬಿದ ಲಾರಿ. ಇನ್ನು ಲಾರಿಯಲ್ಲಿದ್ದ ಬಿಯರ್ ಬಾಟಲ್‌ಗಳು ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿಯರ್ ಹೊಳೆಯಂತೆ ಹರಿಯಿತು. 

ಟೋಲ್ ಪ್ಲಾಜಾಗೆ ನುಗ್ಗಿದ ಲಾರಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಏಕಾಏಕಿ ನುಗ್ಗಿದ ಲಾರಿಯಿಂದ ಸೃಷ್ಟಿಯಾದ ಅವಾಂತರಕ್ಕೆ ಸಾಕ್ಷಿಯಾಗಿದೆ. ಇನ್ನು ಟೋಲ್ ಪ್ಲಾಜಾಗೆ ಲಾರಿ ನುಗ್ಗಿದ ಪರಿಣಾಮ, ಪ್ಲಾಜಾಗೆ ಭಾರೀ ಹಾನಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲವಂತೆ.