ತೆಲಂಗಾಣ ರಾಷ್ಟ್ರ ಸಮಿತಿಯ ಅಭ್ಯರ್ಥಿಯ್ಬೊರು ಓಟಿಗಾಗಿ ಮಗುವಿನ ಪೃಷ್ಠವನ್ನು ತೊಳೆಸಿ ಸುದ್ದಿಯಾಗಿದ್ದಾರೆ.

ತೆಲಂಗಾಣದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳು ಮತ ಯಾಚನೆಗೆ ಭಿನ್ನ ರೀತಿಯ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಕೆಲ ಅಭ್ಯರ್ಥಿಗಳು ಪುರುಷರಿಗೆ ಕ್ಷೌರ, ಸ್ನಾನವನ್ನೂ ಮಾಡಿಸಿದ್ದರು. ಇದೀಗ ತೆಲಂಗಾಣ ರಾಷ್ಟ್ರ ಸಮಿತಿಯ ಅಭ್ಯರ್ಥಿಯ್ಬೊರು ಮಗುವಿನ ಪೃಷ್ಠವನ್ನು ತೊಳೆಸಿ ಸುದ್ದಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೈರ್ಮಲ್ಯ ಎಷ್ಟು ಮುಖ್ಯ ಎಂಬುವುದನ್ನು ತೋರಿಸಿಕೊಡಲು ಅಭ್ಯರ್ಥಿ ಹೀಗೆ ಮಾಡಿದ್ದಾರೆನ್ನಲಾಗಿದೆ. ಆದರೆ, ಈ ಅಭ್ಯರ್ಥಿಯ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

2018ರ ಡಿಸೆಂಬರ್ 7 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಮತ ಎಣಿಕೆ ನಡೆಯಲಿದೆ.