ಬೆಂಗಳೂರು [ಜು.22] : ರಾಜ್ಯ ರಾಜಕೀಯ ಪ್ರಹಸನ ಮುಂದುವರಿದಿದೆ. ಮೈತ್ರಿ ಪಾಳಯಕ್ಕೆ ವಿಶ್ವಾಸಮತ ಯಾಚಿಸಲು ಇಂದು ಡೆಡ್ ಲೈನ್ ನೀಡಲಾಗಿದೆ. 

ಈ ವೇಳೆ ಜಯಗಳಿಸಲು ಕಾಂಗ್ರೆಸ್ - ಜೆಡಿಎಸ್ ನಾಯಕರು ಸಿದ್ಧರಾಗುತ್ತಿದ್ದಾರೆ. ಅಂತಿಮ ಹಂತದ ಪ್ರಯತ್ನ ಮಾಡುವಲ್ಲಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕಾರ್ಯನಿರತರಾಗಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಉಳಿಸಲು ಕೊನೆಯ ಸಿದ್ಧತೆ ನಡೆಸಿದ್ದಾರೆ. ಮೈತ್ರಿ ನಾಯಕರ ಜೊತೆಗೆ ದೂರವಾಣಿ ಮೂಲಕ ಮಾತನಾಡಿ, ಸರ್ಕಾರ ಉಳಿಸಲು ಇನ್ನು ಯಾವ ಪ್ರಯತ್ನ ಮಾಡಬಹುದು ಎನ್ನುವ ಬಗ್ಗೆ ಮಾತನಾಡಿದ್ದಾರೆ.