ಅಗರ್ತಲಾ[ಜೂ.11]: ತ್ರಿಪುರಾ ಆಡಳಿತ ಪಕ್ಷ ಐಪಿಎಫ್‌ಟಿ ಪಕ್ಷದ ಶಾಸಕರೊಬ್ಬರು ತನ್ನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆಯನ್ನೇ ವಿವಾಹ ಆಗಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಮಹಿಳೆ ಮೇ 20ರಂದು ದೂರು ನೀಡಿದ್ದಳು. ಬಳಿಕ ಇಬ್ಬರ ಮಧ್ಯೆಯೂ ರಾಜಿ ಏರ್ಪಟ್ಟಿದ್ದು, ವಿವಾಹ ಆಗಲು ಶಾಸಕ ಧನಂಜಯ್‌ ಒಪ್ಪಿಕೊಂಡಿದ್ದರು.

ಅಗರ್ತಲಾದಲ್ಲಿರುವ ಚತುರ್ದಾಸ್‌ ದೇವತಾ ಮಂದಿರದಲ್ಲಿ ಐಪಿಎಫ್‌ಟಿ ಶಾಸಕ ಧನಂಜಯ್‌ ಹಾಗೂ ಸಂತ್ರಸ್ತ ಮಹಿಳೆಯ ವಿವಾಹ ಭಾನುವಾರ ಜರುಗಿದೆ. ಈ ಮೂಲಕ ಪ್ರಕರಣವನ್ನು ಖುಲಾಸೆಗೊಳಸಲಾಗಿದೆ.