ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಗರ್ತಲಾ ರ‍್ಯಾಲಿ ವೇಳೆ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿಯೇ ತ್ರಿಪುರ ಸಚಿವರೋರ್ವರು ತಮ್ಮ ಮಹಿಳಾ ಸಹೋದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. 

ಮುಖ್ಯಮಂತ್ರಿ ಬಿಪ್ಲವ್ ದೇವ್ ಸಂಪುಟದಲ್ಲಿ ಸಚಿವರಾಗಿರುವ ಮನೋಜ್ ಕಂಟಿ ದೇಬ್ ಸಮಾಜ ಕಲ್ಯಾಣ ಸಚಿವೆ ಸಂತಾನ ಚಕ್ಮಾ ಅವರ ಸೊಂಟದ ಮೇಲೆ ಕೈ ಇಟ್ಟಿದ್ದಾರೆ.  ಈ ವೇಳೆ ಸಚಿವೆ ಅವರ ಕೈಯನ್ನು ತಳ್ಳಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

ಈ ಘಟನೆ ಬೆನ್ನಲ್ಲೇ ಇಲ್ಲಿನ ವಿಪಕ್ಷಗಳು ಸಚಿವ ಮನೋಜ್ ಕಂಟಿಯವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿವೆ. ತಮ್ಮ ಸಹೋದ್ಯೋಗಿಗೆ ಈ ರೀತಿ ಕಿರಕುಳ ನೀಡಿದ ಸಚಿವರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.