ತ್ರಿವಳಿ ತಲಾಖ್ ಇಸ್ಲಾಮಿನ ಮೂಲ ಮತ್ತು ಅವಿಭಾಜ್ಯ ಅಂಗವಲ್ಲ. ಧರ್ಮದ ತಳಪಾಯವನ್ನೇ ಬುಡಮೇಲು ಮಾಡುವ ತ್ರಿವಳಿ ತಲಾಖನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್’ಗೆ ಹೇಳಿದೆ.
ನವದೆಹಲಿ (ಮೇ.17): ತ್ರಿವಳಿ ತಲಾಖ್ ಇಸ್ಲಾಮಿನ ಮೂಲ ಮತ್ತು ಅವಿಭಾಜ್ಯ ಅಂಗವಲ್ಲ. ಧರ್ಮದ ತಳಪಾಯವನ್ನೇ ಬುಡಮೇಲು ಮಾಡುವ ತ್ರಿವಳಿ ತಲಾಖನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್’ಗೆ ಹೇಳಿದೆ.
ಮುಸ್ಲೀಂ ಪ್ರಾಬಲ್ಯ ದೇಶಗಳಲ್ಲೇ ತ್ರಿವಳಿ ತಲಾಖ್ ಜಾರಿಯಲ್ಲಿಲ್ಲ. ಹಾಗಿದ್ದ ಮೇಲೆ ಇದು ಇಸ್ಲಾಂಗೆ ಅಗತ್ಯವೆಂದು ಹೇಳಲು ಸಾಧ್ಯವಿಲ್ಲ. ಇದು ಅವರವರ ಆಯ್ಕೆಗೆ ಬಿಟ್ಟ ವಿಚಾರವೆಂದು ಮುಸ್ಲೀಂ ವೈಯಕ್ತಿಕ ಮಂಡಳಿ ವಾದಿಸಿದರೆ ತ್ರಿವಳಿ ತಲಾಖ್ ಹೇಗೆ ಇಸ್ಲಾಂನ ಅವಿಭಾಜ್ಯ ಅಂಗವಾಗುತ್ತದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ನ್ಯಾಯಾಲಯವನ್ನು ಪ್ರಶ್ನಿಸಿದ್ದಾರೆ.
ತ್ರಿವಳಿ ತಲಾಖ್ ಮುಸ್ಲೀಂ ಸಮುದಾಯದ ಮಹಿಳೆಯರು ಹಾಗೂ ಪುರುಷರ ನಡುವಿನ ಹೋರಾಟ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಶೋಷಿಸಲಾಗುತ್ತಿದೆ. ಇದು ಕೇವಲ ಅಂತರ್ ಧರ್ಮದ ವಿಚಾರವಾಗಿರದೇ ಮಹಿಳಾ ಹಕ್ಕಿನ ವಿಚಾರವಾಗಿದೆ. ಸುಪ್ರೀಂಕೋರ್ಟ್ ಇದನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಹೇಳಿದೆ.
