ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರುವ ತ್ರಿವಳಿ ತಲಾಖ್ ವಿಚಾರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಸಲ್ಮಾನರಲ್ಲಿ ತ್ರಿವಳಿ ತಲಾಖ್ 1400 ವರ್ಷಗಳಿಂದ ಚಾಲ್ತಿಯಲ್ಲಿದೆ. ಅದೇಗೆ ಅನ್ ಇಸ್ಲಾಮಿಕ್ ಆಗುತ್ತದೆ ಎಂದು ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನವದೆಹಲಿ (ಮೇ.16): ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರುವ ತ್ರಿವಳಿ ತಲಾಖ್ ವಿಚಾರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಸಲ್ಮಾನರಲ್ಲಿ ತ್ರಿವಳಿ ತಲಾಖ್ 1400 ವರ್ಷಗಳಿಂದ ಚಾಲ್ತಿಯಲ್ಲಿದೆ. ಅದೇಗೆ ಅನ್ ಇಸ್ಲಾಮಿಕ್ ಆಗುತ್ತದೆ ಎಂದು ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಕ್ರಿ.ಶ 637 ರಿಂದ ತ್ರಿವಳಿ ತಲಾಖ್ ಜಾರಿಯಲ್ಲಿದೆ. ಇದನ್ನು ಅನ್ ಇಸ್ಲಾಮಿಕ್ ಎನ್ನಲು ನಾವ್ಯಾರು? ಕಳೆದ 1400 ವರ್ಷಗಳಿಂದ ಮುಸ್ಲೀಮರು ಇದನ್ನು ಆಚರಿಸುತ್ತಾ ಬಂದಿದ್ದಾರೆ. ಇದು ನಂಬಿಕೆಯ ಪ್ರಶ್ನೆ. ಹಾಗಾಗಿ ಸಾಂವಿಧಾನಿಕ ನೈತಿಕತೆ ಹಾಗೂ ಸಮಾನತೆಯ ಪ್ರಶ್ನೆಯೇ ಬರುವುದಿಲ್ಲವೆಂದು ಮುಸ್ಲೀಂ ವೈಯಕ್ತಿಕ ಮಂಡಳಿ ಪರ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆಂಬುದು ಹೇಗೆ ಹಿಂದೂಗಳ ನಂಬಿಕೆಯೋ ಹಾಗೆ ತ್ರಿವಳಿ ತಲಾಖ್ ಕೂಡಾ ಮುಸ್ಲೀಮರ ನಂಬಿಕೆ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆಂಬುದು ನಂಬಿಕೆ. ಇಲ್ಲಿ ಸಾಂವಿಧಾನಿಕ ನೈತಿಕತೆಯ ಪ್ರಶ್ನಯೇ ಬರುವುದಿಲ್ಲವೆಂದು ಕಪಿಲ್ ಸಿಬಲ್ ಪಂಚ ಸದಸ್ಯ ನ್ಯಾಯಾಧೀಶರ ಪೀಠಕ್ಕೆ ಕೇಳಿದ್ದಾರೆ.