ಲಾಟರಿಯಲ್ಲಿ ₹6 ಕೋಟಿ ಗೆದ್ದ ಕೇರಳದ ರೈತರಿಗೆ ಜಮೀನು ಉಳುಮೆ ಮಾಡುವಾಗ ಪುರಾತನ ನಾಣ್ಯಗಳ ಖಜಾನೆ ದೊರಕಿದೆ. ತಿರುವಾಂಕೂರು ಮಹಾರಾಜರ ಕಾಲದ ಈ ನಾಣ್ಯಗಳನ್ನು ರೈತ ಸಂಬಂಧಿಸಿದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಾನೂನಿನ ಪ್ರಕಾರ ಇಂತಹ ನಿಧಿಗಳು ಸರ್ಕಾರಕ್ಕೆ ಸೇರಿದ್ದಾಗಿವೆ.

ಜೀವನದಲ್ಲಿ ಒಮ್ಮೆಯಾದ್ರೂ ಲಾಟರಿ ಸಿಗಲಪ್ಪ ಎಂದು ಎಷ್ಟೋ ಜನರು ಕೂತಲ್ಲೇ ಹಗಲುಗನಸು ಕಾಣುತ್ತಾರೆ. ಭಾರತದಲ್ಲಿ ಎಷ್ಟೋ ಜನರಿಗೆ ನಿಧಿ ಸಿಕ್ಕಿದ ಉದಾಹರಣೆಗಳು ಇವೆ. ಎಷ್ಟೋ ಜನರು ನಿಧಿಗೋಸ್ಕರ ಅಪರಾಧ ಮಾಡಿ, ಸಿಕ್ಕಿಬಿದ್ದಿದ್ದಾರೆ. ಆದರೆ ಇಲ್ಲೋರ್ವ ರೈತನಿಗೆ ಆತ ಇದ್ದಲ್ಲಿ ಅದೃಷ್ಟ ಎನ್ನೋದು ಒಂದಲ್ಲ, ಎರಡು ಬಾರಿ ಹುಡುಕಿಕೊಂಡು ಬಂದಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಇದೀಗ ವೈರಲ್ ಆಗುತ್ತಿದೆ. ಆದರಿದು ಡಿಸೆಂಬರ್ 2019 ರ ಸುದ್ದಿಯಾಗಿದ್ದು, ಇದೀಗ ಪ್ರೆಶ್ ಸುದ್ದಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಲಾಟರಿಯಲ್ಲಿ ಬಂದ ಹಣದಿಂದ ಜಮೀನು ಖರೀದಿ! 
ಕೇರಳದ ಕಿಲಿಮನೂರಿನ 66 ವರ್ಷದ ರೈತ ಬಿ. ರತ್ನಾಕರನ್ ಪಿಳ್ಳೈ ಅವರಿಗೆ ₹6 ಕೋಟಿ ಲಾಟರಿ ಹಣ ಬಂದಿತ್ತು. 2019ರಲ್ಲಿ, ಅವರು ಕ್ರಿಸ್ಮಸ್ ಲಾಟರಿಯಲ್ಲಿ ₹6 ಕೋಟಿ ಗೆದ್ದರು. ಅದನ್ನು ಅವರು ಜಮೀನು ಖರೀದಿ ಮಾಡಿದ್ದರು. ಐಷಾರಾಮಿ ಜೀವನ ಮಾಡುವ ಬದಲು, ಅವರು ತರಕಾರಿ ಕೃಷಿಯ ಒಲವು ಹೊಂದಿದ್ದು, ಕೃಷಿ ಮಾಡಬೇಕು ಎಂದು ಜಮೀನು ಖರೀದಿ ಮಾಡಿದ್ದರು. 

ನೂರು ವರ್ಷಗಳಿಗೂ ಹಳೆಯದಾದ ಕಾಯಿನ್‌ಗಳು! 
ಲಾಟರಿ ಹಣದಿಂದ ಜಮೀನು ಖರೀದಿಸಿದ ನಂತರ, ಪಿಳ್ಳೈ ತಮ್ಮ ಹೊಸ ಜಮೀನನ್ನು ಉಳುಮೆ ಮಾಡುತ್ತಿದ್ದರು. ಆಗ ಅವರಿಗೆ 2,595 ಪುರಾತನ ನಾಣ್ಯಗಳು ಇದ್ದ ಖಜಾನೆ ಸಿಕ್ಕಿದೆ. 20 ಕೆಜಿಗಿಂತಲೂ ಹೆಚ್ಚು ತೂಕದ ಮಣ್ಣಿನ ಕೊಡ ಇದಾಗಿದೆ. ತಜ್ಞರ ಪ್ರಕಾರ, ಈ ನಾಣ್ಯಗಳು ತಿರುವಾಂಕೂರು ಮಹಾರಾಜರ (Thiruvangoor King) ಕಾಲಕ್ಕೆ ಸೇರಿದವು ಎನ್ನಲಾಗಿದೆ. ಇದು ಕೇರಳದ ರಾಜಮನೆತನದ (Kerala Kingdom) ಇತಿಹಾಸದ ಗುಪ್ತ ನಿಧಿಯಾಗಿತ್ತು.ಇದು ಒಂದು ಶತಮಾನಕ್ಕಿಂತ ಹೆಚ್ಚು ಹಳೆಯದೆಂದು ನಂಬಲಾದ ಈ ಕಂಚಿನ ನಾಣ್ಯಗಳು ಆ ಪ್ರದೇಶದ ಶ್ರೀಮಂತ ಇತಿಹಾಸವನ್ನು (Rich History) ತೋರಿಸುತ್ತವೆ.

ಅಧಿಕಾರಿಗಳಿಗೆ ಒಪ್ಪಿಸಿದ ರೈತ! 
ಈ ನಾಣ್ಯದಿಂದ ನಮ್ಮ ಕಾಲಡಿಯಲ್ಲಿ ಮರೆಯಾಗಿರುವ ಕಥೆಗಳು ಏನು ಎಂದು ಹೇಳುತ್ತದೆ. 1878ರ ಭಾರತೀಯ ಖಜಾನೆ ಕಾಯ್ದೆಯ ಪ್ರಕಾರ, ಇಂತಹ ಆಸ್ತಿಗಳು ಸರ್ಕಾರದ ಆಸ್ತಿಯೆಂದು ಪರಿಗಣಿಸಲ್ಪಡುತ್ತವೆ. ಕಾನೂನಿಗೆ ಬದ್ಧರಾಗಿ ಮತ್ತು ತಮ್ಮ ಮೌಲ್ಯಗಳಿಗೆ ತಕ್ಕಂತೆ, ಪಿಳ್ಳೈ ಅವರು 1968ರ ಕೇರಳ ಟ್ರೆಷರ್ ಟ್ರೋವ್ ಕಾಯಿದೆಯಡಿ ಈ ನಿಧಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಶೋಧನೆಗಾಗಿ ಅವುಗಳ ಸಂರಕ್ಷಣೆ ಮಾಡಲಾಗುತ್ತದೆ. ಒಬ್ಬ ರೈತನ ಹೊಲವು ಮರೆತುಹೋಗಿದ್ದ ರಾಜವಂಶದ ಪರಂಪರೆಯ ದ್ವಾರವಾಯಿತು.

ನಿಧಿ ಬಗ್ಗೆ ಯಾರು, ಯಾರು ಏನಂತಾರೆ? 
ನಿಧಿ ಬಗ್ಗೆ ಅನೇಕರು ಒಂದೊಂದು ರೀತಿಯ ಮಾತನಾಡುತ್ತಾರೆ. ನಿಧಿ ಸಿಕ್ಕಾಗ ಆ ಹಣದಲ್ಲಿ ಮೂರು ಪಾಲು ಮಾಡಿ ಒಂದನ್ನು ದೇವರಿಗೆ ಕೊಡಬೇಕು, ಉಳಿದವುಗಳನ್ನು ಸಮಾಜ ಸೇವೆ, ಹಾಗೆ ನಮಗೆ ಇಟ್ಟುಕೊಳ್ಳಬೇಕು ಎಂದು ವಾಡಿಕೆಯಲ್ಲಿ ಹೇಳೋದಿದೆ. ಹೀಗಾಗಿ ನಿಧಿ ಸಿಕ್ಕರೂ ಕೂಡ ಕೆಲವರು ಅದನ್ನು ಬಳಸಲು ಯೋಚನೆ ಮಾಡ್ತಾರೆ. ಆದರೆ ಕಾನೂನಿನ ಪ್ರಕಾರ ಇದನ್ನು ಯಾರೂ ಇಟ್ಟುಕೊಳ್ಳುವ ಹಾಗಿಲ್ಲ, ಅಪರಾಧ ಆಗುತ್ತದೆ. 

ನಿಧಿಯನ್ನು ಕಾಯುವ ಸರ್ಪ! 
ಜ್ಯೋತಿಷ್ಯದ ಪ್ರಕಾರ ಎಲ್ಲರಿಗೂ ನಿಧಿ ಸಿಗೋದಿಲ್ಲ, ಯಾರಿಗೆ ನಿಧಿ ಸಿಗುವ ಯೋಗ ಇರುತ್ತದೆಯೋ ಅವರಿಗೆ ಮಾತ್ರ ಸಿಗುವುದು. ನಿಧಿ ಸಿಗುತ್ತದೆ ಎಂದರೆ ಮೊದಲೇ ಕೆಲ ಸೂಚನೆಗಳು ಕೂಡ ಇರುತ್ತವೆಯಂತೆ. ಚಿಕ್ಕಮಗಳೂರಿನಲ್ಲಿ ನಿಧಿ ಸಿಗತ್ತೆ ಅಂತ ಆಳದ ಗುಂಡಿ ತೆಗೆದಿದ್ದರು. ಆಗ ಆ ಗುಂಡಿಗೆ ಕರಡಿಯೊಂದು ಬಂದು ಬಿದ್ದಿತ್ತು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ನಿಧಿಯನ್ನು ಸರ್ಪಗಳು ಕಾಯುತ್ತವೆ ಎಂದು ಹೇಳಲಾಗುತ್ತದೆ. ಆ ನಿಧಿಗೆ ನಾವು ವಾರಸದಾರರು ಆಗಿಲ್ಲ ಎಂದರೆ ನಿಧಿಯ ಬಳಿ ಸರ್ಪ ಹೋಗಲು ಬಿಡೋದಿಲ್ಲ. 

View post on Instagram