Asianet Suvarna News Asianet Suvarna News

ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಬೆಟರ್ ಎಂದ ಮಾಜಿ ಕ್ರಿಕೆಟಿಗ

ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು  ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುವುದಕ್ಕಿಂತ ಪಾಕಿಸ್ತಾನದಲ್ಲಿ ಪ್ರವಾಸ ಮಾಡುವುದೇ ಉತ್ತಮ ಎಂದು ಹೇಳಿ ವಿವಾದ ಹೊತ್ತಿಸಿದ್ದಾರೆ.

Travel experience in Pakistan better compared to South India says Navjot Singh Sidhu
Author
Bengaluru, First Published Oct 13, 2018, 6:31 PM IST
  • Facebook
  • Twitter
  • Whatsapp

ನವದೆಹಲಿ[ಅ.13] ಪಾಕಿಸ್ತಾನದ ಸೇನಾ ಮುಖ್ಯಸ್ಥರೊಂದಿಗೆ ಅಪ್ಪುಗೆಯಲ್ಲಿ ಕಾಣಿಸಿಕೊಂಡಿದ್ದ ಸಿಧು ಇಮ್ರಾನ್ ಖಾನ್ ಪ್ರಮಾಣ ವಚನದಲ್ಲಿಯೂ ಭಾಗಿಯಾಗಿದ್ದರು. ಹಿಮಾಚಲ ಪ್ರದೇಶದ ಕಶೌಲಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಿಧು ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುವಾಗ ಮೊದಲಿಗೆ ಅಲ್ಲಿನ ಭಾಷೆ ಅರ್ಥ ಆಗುವುದಿಲ್ಲ. ನಂತರ ಅಲ್ಲಿಯ ಆಹಾರ ಸಹ ಇಷ್ಟವಾಗುವುದಿಲ್ಲ. ಆದರೆ ಪಾಕಿಸ್ತಾನದಲ್ಲಿ ಈ ಯಾವ ಸಮಸ್ಯೆಗಳು ಆಗಲಿಲ್ಲ ಎಂದು ಹೇಳಿದ್ದಾರೆ.

ಸಿಧು ಪ್ರಚಾರಕ್ಕಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಇದು ಸಿಧು ವೈಯಕ್ತಿಕ ಅಭಿಪ್ರಾಯ ಎಂದು ಕಾಂಗ್ರೆಸ್ ಹೇಳಿದ್ದರೆ ಸಿಧು ಪಾಕ್ ಪ್ರೀತಿಗೆ ಏನು ಹೇಳಬೇಕು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.


 

Follow Us:
Download App:
  • android
  • ios