'ನನಗೆ ಬಸುದೇವ್ ಅವರನ್ನು ವಿವಾಹ  ಆಗಿರುವುದಕ್ಕೆ ತುಂಬ ಸಂತೋಷವಾಗಿದ್ದು, ನನ್ನಂತಹ ತೃತೀಯ ಲಿಂಗಿಯನ್ನು  ಮದುವೆಯಾಗಲು ಧೈರ್ಯ ತೋರಿದ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ'

ಮೇಘ ಎಂಬ ತೃತೀಯ ಲಿಂಗಿಯನ್ನ ಬಸುದೇವ ಎಂಬ ಪುರುಷನೊಬ್ಬ ವಿವಾಹವಾಗಿದ್ದಾನೆ. ಈ ಅಪರೂಪದ ಘಟನೆ ನಡೆದಿರುವುದು ಒಡಿಶಾದ ಭುವನೇಶ್ವರದಲ್ಲಿ. ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿ ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನೆರವೇರಿಸಿದರು. ವಿವಾಹ ಸಮಾರಂಭದಲ್ಲಿ ಹಲವು ಸ್ಥಳೀಯ ಗಣ್ಯರು ಆಗಮಿಸಿ ನವಜೋಡಿಗಳಿಗೆ ಶುಭ ಕೋರಿದರು.

'ನನಗೆ ಬಸುದೇವ್ ಅವರನ್ನು ವಿವಾಹ ಆಗಿರುವುದಕ್ಕೆ ತುಂಬ ಸಂತೋಷವಾಗಿದ್ದು, ನನ್ನಂತಹ ತೃತೀಯ ಲಿಂಗಿಯನ್ನು ಮದುವೆಯಾಗಲು ಧೈರ್ಯ ತೋರಿದ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ' ಎಂದು ತೃತೀಯ ಲಿಂಗಿ ಮೇಘ ಹೇಳಿದ್ದಾಳೆ. ಮೂರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್'ನ ನ್ಯಾಯಪೀಠ ದೇಶದಲ್ಲಿ ತೃತೀಯ ಲಿಂಗಿಗಳ ಹಕ್ಕುಗಳನ್ನು ಗುರುತಿಸಿ ಅವರಿಗಾಗಿ ಪ್ರತ್ಯೇಕ ಮತದಾನದಲ್ಲಿ ಲಿಂಗದ ಹೆಸರು ನಮೂದು, ಪಾಸ್'ಪೋರ್ಟ್, ಚಾಲನಾ ಪರವಾನಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮುಂತಾದ ಅವಕಾಶ ನೀಡುವಂತೆ ತೀರ್ಪು ನೀಡಿತ್ತು.