ಬೆಂಗಳೂರು(ಡಿ.07): ನಗರದಲ್ಲಿ ಮಂಗಳಮುಖಿಯರ ಅನೈತಿಕ ಚಟುವಟಿಕೆ, ಪುಂಡಾಟ ಮುಂದುವರಿದಿದೆ. ಕಳೆದ ಯುವಕನೋರ್ವನ ಮೇಲೆ ಮಂಗಳಮುಖಿಯರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬ್ಯಾಟರಾಯನಪುರದ ಟೋಟಲ್ ಗ್ಯಾಸ್ ಬಂಕ್ ಮುಂದೆ ನಡೆದಿದೆ.

ರಸ್ತೆ ಬದಿಯಲ್ಲಿ ಕೈಗೆ ಸಿಕ್ಕ ಕಲ್ಲುಗಳಿಂದ ಮೂವರು ಮಂಗಳಮುಖಿಯರ ಗುಂಪು ಯುವಕನ ತಲೆಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. 31 ವರ್ಷ ವಯಸ್ಸಿನ ಸ್ವಾಮಿ, ಗಂಭೀರವಾಗಿ ಗಾಯಗೊಂಡಿರುವ ಯುವಕ. ಬ್ಯಾಟರಾಯನಪುರದಲ್ಲಿ ಮರಳು ಮಾರಾಟಕ್ಕೆ ಬಂದು ನಿಲ್ಲುವ ಲಾರಿ ನಿರ್ವಾಹಕನಾಗಿರುವ ಸ್ವಾಮಿ, ಅನೈತಿಕ ಚಟುವಟಿಕೆಗಳನ್ನು ಪ್ರಶ್ನಿಸಿದ್ದಾನೆ.

ಇದರಿಂದದ ಕೆರಳಿದ ತೃತೀಯ ಲಿಂಗಿಗಳು ಸ್ವಾಮಿ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿ ಪೊಲೀಸ್ರಿಗು ಸುದ್ದಿ ಮುಟ್ಟಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸರು, ಇಬ್ಬರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.