ಚೆನ್ನೈ[ಡಿ.09]: ತಮಿಳುನಾಡಿನ ನಾನಾ ಭಾಗಗಳಿಂದ ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ಏಕಮಾತ್ರ 100 ವರ್ಷದ ಪಂಬನ್ ಕ್ಯಾಂಟಿಲೆವರ್ ರೈಲ್ವೇ ಮೇಲ್ಸೇತುವೆಗೆ ಹಾನಿಯಾಗಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಸಂಪೂರ್ಣ ದುರಸ್ತಿಯಗುವವರೆಗೂ ಅಂದರೆ 45 ದಿನಗಳ ಕಾಲ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಾಗಾಗಿ, ಇನ್ನು ಯಾವುದೇ ಭಾಗದಿಂದ ರಾಮೆಶ್ವರಂಗೆ ತೆರಳಲು ರೈಲುಗಳು ಲಭ್ಯವಿರುವುದಿಲ್ಲ. 

ಮೇಲ್ಸೇತುವೆಯ ಶೇರ್ಜರ್ ರೋಲಿಂಗ್ ಮಾದರಿಯ ಲಿಫ್ಟ್‌ಸ್ಟ್ಯಾನ್ ಮುರಿದು ಹೋಗಿರುವುದು ಹಾಗೂ ಕೆಲವೆಡೆ ಮೇಲ್ಸೇತುವೆ ಮೇಲಿನ ರೈಲ್ವೇ ಹಳಿಗೆ ಕೂಡಾ ಹಾನಿಯಾಗಿದೆ.