ಈ ವರ್ಷ್ಯಾಂತ್ಯ ಎಲ್ಲರ ಮನೆಯಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಸಂಭ್ರಮ ಮನೆ  ಮಾಡಿದ್ದರೆ ಇವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಮದುವೆಯಾಗಿ ಕೇವಲ 20 ದಿನಗಳೊಳಗೆ ಪತಿ ಸಾವಿನ ಮನೆ ಸೇರಿದ್ದಾರೆ.

ನವದೆಹಲಿ (ಜ.01): ಈ ವರ್ಷ್ಯಾಂತ್ಯ ಎಲ್ಲರ ಮನೆಯಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಸಂಭ್ರಮ ಮನೆ ಮಾಡಿದ್ದರೆ ಇವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಮದುವೆಯಾಗಿ ಕೇವಲ 20 ದಿನಗಳೊಳಗೆ ಪತಿ ಸಾವಿನ ಮನೆ ಸೇರಿದ್ದಾರೆ.

2015 ರ ಬ್ಯಾಚ್'ನ ಐಐಎಸ್ ಅಧಿಕಾರಿ (ಇಂಡಿಯನ್ ಇನ್'ಫಾರ್ಮೇಶನ್ ಸರ್ವಿಸ್ ) ದೀಪಕ್ ಸಕ್ಸೇನಾ ಮೃತಪಟ್ಟ ದುರ್ದೈವಿ. ಎತವಾ ಜಿಲ್ಲೆಯ ಆಗ್ರಾ ಎಕ್ಸ್;ಪ್ರೆಸ್'ವೇ ಬಳಿ ನಡೆದ ರಸ್ತೆ ಅಪಘಾತದಲ್ಲಿ ದೀಪಕ್ ಮೃತಪಟ್ಟಿದ್ದಾರೆ.

ಪತ್ನಿ ಹಾಗೂ ತಾಯಿಯ ಜೊತೆ ದೆಹಲಿಗೆ ಬರುತ್ತಿರುವಾಗ ಕಾರ್'ನ ಟೈರ್ ಸ್ಫೋಟಗೊಂಡು, ಕಾರ್ ಡಿವೈಡರ್'ಗೆ ಡಿಕ್ಕಿ ಹೊಡೆದು ದೀಪಕ್ ಜವರಾಯನ ಮನೆ ಸೇರಿದ್ದಾರೆ. ಪತ್ನಿ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.