ಎಂಜಿನ್‌ ರಹಿತ ಟ್ರೈನ್‌-18 ಹೈಸ್ಪೀಡ್‌ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಮುಂದಿನ ತಿಂಗಳಿನಿಂದ ಆರಂಭಿಸಲಿದೆ. ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದ ಬಳಿಕ ರೈಲನ್ನು ಪ್ರಯಾಣಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. 

ನವದೆಹಲಿ: ಭಾರತೀಯ ರೈಲ್ವೆಯು ಸ್ವದೇಶಿ ನಿರ್ಮಿತ ಎಂಜಿನ್‌ ರಹಿತ ಟ್ರೈನ್‌-18 ಹೈಸ್ಪೀಡ್‌ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಮುಂದಿನ ತಿಂಗಳಿನಿಂದ ಆರಂಭಿಸಲಿದೆ. ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದ ಬಳಿಕ ರೈಲನ್ನು ಪ್ರಯಾಣಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. 

ರೈಲ್ವೆಗೆ ತಾಂತ್ರಿಕ ಸಲಹೆ ನೀಡುವ ಸಂಶೋಧನೆ ವಿನ್ಯಾಸ ಮತ್ತು ಗಣಮಟ್ಟಸಂಘಟನೆ (ಆರ್‌ಡಿಎಸ್‌ಒ) ಟ್ರೈನ್‌-18 ರನ್ನು ಪರೀಕ್ಷೆಗೆ ಒಳಪಡಿಸಿ, ಪ್ರಮಾಣೀಕರಿಸಲಿದೆ. ಟ್ರೈನ್‌-18 ರೈಲು ಎಂಜಿನ್‌ ಬೋಗಿಯಿಂದ ಚಲಿಸುವ ಬದಲು, ಪ್ರತಿಯೊಂದು ಬೋಗಿಗೆ ಅಳವಡಿಸಲಾದ ಮೋಟರ್‌ಗಳ ಸಹಾಯದಿಂದ ಚಲಿಸುತ್ತದೆ. 

ಚೆನ್ನೈನ ರೈಲು ಬೋಗಿ ತಯಾರಿಕಾ ಫ್ಯಾಕ್ಟರಿಯಲ್ಲಿ ಟ್ರೈನ್‌-18 ರೈಲನ್ನು ಸಿದ್ಧಪಡಿಸಲಾಗಿದೆ. ಈ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.