ಆಟೋ ಚಾಲಕರೇ ಹುಷಾರ್..!

First Published 11, Jul 2018, 9:39 AM IST
Traffic Rule Violation Case Register Against Auto Drivers
Highlights

ಆಟೋ ಚಾಲಕರೇ ಎಚ್ಚರ. ನಿಮ್ಮ ಸದಾ ಇರಲಿದೆ ಇವರ ಕಣ್ಣು. ನೀವು ಯಾವುದೇ ಕಾರಣಕ್ಕೂ ಕಾನೂನು ನಿಯಮ ಉಲ್ಲಂಘನೆ ಮಾಡಿದಲ್ಲಿ ನಿಮ್ಮ ದಾಖಲಾಗುತ್ತೆ ಕೇಸ್

ಬೆಂಗಳೂರು :  ಸಂಚಾರ ನಿಯಮ ಉಲ್ಲಂಘಿಸಿದ ಆಟೋಗಳ ವಿರುದ್ಧ ಸಂಚಾರ ಪೊಲೀಸರ ಕಾರ್ಯಾ ಚರಣೆ ಮುಂದುವರೆದಿದ್ದು, ಮಂಗಳವಾರ ಕಾನೂನು ಮೀರಿದ ಆಟೋಗಳ ಮೇಲೆ 3 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಿದ್ದಾರೆ. 

ಅಧಿಕ ಬಾಡಿಗೆ ಪಡೆಯುವುದು, ಪ್ರಯಾಣಿಕರು ಕರೆದ ಕಡೆ ಹೋಗದಿರುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ ಆಟೋಗಳಿಗೆ ಪೊಲೀಸರು ಬಿಸಿ ಮುಟ್ಟಿ ಸಿದ್ದು, ಈ ಸಂಬಂಧ ನಗರ ವ್ಯಾಪ್ತಿಯಲ್ಲಿ ಸೋಮವಾರದಿಂದ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 

ಮೊದಲ ದಿನ 6000 ಕ್ಕೂ ಅಧಿಕ ಪ್ರಕರಣ ದಾಖಲಿಸಿದ್ದ ಪೊಲೀಸರು, ಮಂಗಳವಾರ ಕೂಡಾ ಆಟೋಗಳ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ. ಇದುವರೆಗೆ 9787 ಪ್ರಕರಣಗಳು ದಾಖಲಿಸಿಕೊಂಡು 900 ಆಟೋಗಳನ್ನು ಜಪ್ತಿ ಮಾಡಿ ದ್ದಾರೆ. 

ಮೆಜೆಸ್ಟಿಕ್, ಸಿಟಿ ರೈಲ್ವೆ ನಿಲ್ದಾಣ, ಕಾರ್ಪೋ ರೇಷನ್ ಸರ್ಕಲ್, ಎಂ.ಜಿ.ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನದಾಗಿ ಆಟೋಗಳಿಗೆ ದಂಡ ಪ್ರಯೋಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

loader