ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್

First Published 14, May 2018, 7:15 AM IST
Traffic Jam in Bangalore
Highlights

ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 - 3  ದಿನದಿಂದ ಖಾಲಿ ಖಾಲಿಯಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇಂದು  ಮತ್ತೆ ಬ್ಯುಸಿಯಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ತಮ್ಮ ತಮ್ಮ ಊರುಗಳಿಗೆ ಹೋಗಿದ್ದವರು ಪುನಃ ಸಿಲಿಕಾನ್ ಸಿಟಿಗೆ ವಾಪಸ್ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳ್ಳಂ ಬೆಳಗ್ಗೆಯೇ ಫುಲ್ ಟ್ರಾಫಿಕ್ ಜಾಮ್ ಎದುರಾಗಿತ್ತು. 
 

ಬೆಂಗಳೂರು (ಮೇ 14): ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 - 3  ದಿನದಿಂದ ಖಾಲಿ ಖಾಲಿಯಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇಂದು  ಮತ್ತೆ ಬ್ಯುಸಿಯಾಗಿದೆ. 

ರಾಜ್ಯ ವಿಧಾನಸಭೆ ಚುನಾವಣೆಗೆ ತಮ್ಮ ತಮ್ಮ ಊರುಗಳಿಗೆ ಹೋಗಿದ್ದವರು ಪುನಃ ಸಿಲಿಕಾನ್ ಸಿಟಿಗೆ ವಾಪಸ್ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳ್ಳಂ ಬೆಳಗ್ಗೆಯೇ ಫುಲ್ ಟ್ರಾಫಿಕ್ ಜಾಮ್ ಎದುರಾಗಿತ್ತು. 

ಮೆಜೆಸ್ಟಿಕ್ ,ಮೈಸೂರು ರಸ್ತೆ, ತುಮಕೂರು ರಸ್ತೆಯಲ್ಲಿ‌  ಬಸ್ ಗಳು, ವಾಹನಗಳು ಗಂಟೆ ಗಟ್ಟಲೇ ನಿಂತಲ್ಲೇ ನಿಂತಿದ್ದವು.‌ ಕೆಎಸ್ ಆರ್ ಟಿಸಿ , ಖಾಸಗಿ ಬಸ್ , ಕಾರುಗಳು  ಮೂವ್ ಆಗದೆ  ರಸ್ತೆಯಲ್ಲಿ ಅತ್ಯಧಿಕ ಸಮಯ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು. 

ನಗರದಲ್ಲಿ ಸಾಮಾನ್ಯವಾಗಿ ಎಲ್ಲಾ ರಸ್ತೆಗಳಲ್ಲಿಯೂ ಕೂಡ ವಾಹನಗಳ ಸಾಲೇ ಕಂಡು ಬಂದಿತ್ತು.  

ಶನಿವಾರ ಮತದಾನವಾಗಿದ್ದರಿಂದ ಶುಕ್ರವಾರವೇ ಬೆಂಗಳೂರಿನಿಂದ ಸಿಲಿಕಾನ್ ಸಿಟಿ ಖಾಲಿ‌‌ ಮಾಡಿದ್ದ ವಲಸಿಗರು, ಮತ ಹಾಕಲು ತಮ್ಮ ತಮ್ಮ ಊರುಗಳಿಗೆ ಹೋಗಿದ್ದರು.  ಮತದಾನ ಜತೆ ವೀಕೆಂಡ್ ಕಳೆದು ಪುನಃ ಬೆಂಗಳೂರಿಗೆ ವಾಪಸ್ಸು ಆಗುತ್ತಿರುವ ಜನರಿಗೆ ಬೆಳಗ್ಗೆಯೇ ಟ್ರಾಫಿಕ್ ಬಿಸಿ ತಟ್ಟಿತ್ತು.

loader