ನಾಗೇಶ್ ಕಮೀಷನ್ ಆಸೆಗೆ ಹಣ ಬದಲಾವಣೆಯ ದಂಧೆಯಲ್ಲಿ ತೊಡಗಿದ್ದ. ಈತನ ಜೊತೆ ಕೈಜೋಡಿಸಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ(ಡಿ. 12): ಕಪ್ಪುಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ತೊಡಗಿದನೆಂದು ಆರೋಪಿಸಲಾದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಎಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ತಂಡವೊಂದು ನಾಗೇಶ್ ಎಂಬ ವ್ಯಾಪಾರಸ್ಥನನ್ನು ಬಂಧಿಸಿದೆ. ತಿಪಟೂರು ಮೂಲದ ನಾಗೇಶ್ ತಮಿಳುನಾಡಿನಿಂದ ಕೋವಾ ತಂದು ಇಲ್ಲಿಯ ಬೇಕರಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಎನ್ನಲಾಗಿದೆ. ಈತನ ಬಳಿ ಇದ್ದ 2000 ಮತ್ತು 100 ರೂ. ಮುಖಬೆಲೆಯ 11 ಲಕ್ಷ 95 ಸಾವಿರ ಮೌಲ್ಯದ ನೋಟುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಗೇಶ್ ಕಮೀಷನ್ ಆಸೆಗೆ ಹಣ ಬದಲಾವಣೆಯ ದಂಧೆಯಲ್ಲಿ ತೊಡಗಿದ್ದ. ಈತನ ಜೊತೆ ಕೈಜೋಡಿಸಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಡಿ.ಕುಮಾರಸ್ವಾಮಿ, ಸುವರ್ಣನ್ಯೂಸ್, ಚಿತ್ರದುರ್ಗ