. ಕೆಲವು ದಿನಗಳಿಂದ ನಡೆಯುತ್ತಿರುವ ಶಾಸಕರ ರೆಸಾರ್ಟ್ ರಾಜಕೀಯದ ಪರಿಣಾಮ ಝೆಲಿಯಾಂಗ್ ಪುನಃ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಗುವಾಹಟಿ(ಜು.19): ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಶುರ್ಹೋಲ್ಜೀ ಲೈಝೆಟ್ಸು ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯಾಗಿ ಟಿ.ಆರ್. ಝೆಲಿಯಾಂಗ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ 5 ತಿಂಗಳಲ್ಲಿ ಝೆಲಿಯಾಂಗ್ ಅವರಿಗೆ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು ರಾಜಭವನದಲ್ಲಿ 2ನೇ ಬಾರಿಗೆ ಪ್ರಮಾಣ ವಚನ ಭೋದಿಸಿದರು.

ಕಳೆದ ಫೆಬ್ರವರಿಯಲ್ಲಿ ನಗರಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಆದೇಶ ಪ್ರಕಟಿಸಿದ ಕಾರಣ ಬುಡಕಟ್ಟು ಗುಂಪುಗಳು ಪ್ರತಿಭಟನೆ ನಡೆಸಿದ ಪರಿಣಾಮ ಪಕ್ಷದ ಅಧ್ಯಕ್ಷ ಮಾಜಿ ಶುರ್ಹೋಲ್ಜೀ ಲೈಝೆಟ್ಸು ಝೆಲಿಯಾಂಗ್ ಅವರನ್ನು ಸಿಎಂ ಹುದ್ದೆ ಸ್ಥಾನದಿಂದ ಕೆಳಗಿಳಿಸಿ ತಾವೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಕೆಲವು ದಿನಗಳಿಂದ ನಡೆಯುತ್ತಿರುವ ಶಾಸಕರ ರೆಸಾರ್ಟ್ ರಾಜಕೀಯದ ಪರಿಣಾಮ ಝೆಲಿಯಾಂಗ್ ಪುನಃ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.