ಕಾರು ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಟೊಯೋಟ ಈಗ ಭಾರತೀಯ ಗ್ರಾಹಕರಿಗೆ ‘ಯಾರಿಸ್’ ಹೆಸರಿನ ಹೊಸ ಮಾದರಿಯ ಕಾರನ್ನು ಪರಿಚಯ ಮಾಡುತ್ತಿದೆ.

ಬೆಂಗಳೂರು (ಫೆ.22): ಕಾರು ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಟೊಯೋಟ ಈಗ ಭಾರತೀಯ ಗ್ರಾಹಕರಿಗೆ ‘ಯಾರಿಸ್’ ಹೆಸರಿನ ಹೊಸ ಮಾದರಿಯ ಕಾರನ್ನು ಪರಿಚಯ ಮಾಡುತ್ತಿದೆ.

ಪ್ರಸಕ್ತ ವರ್ಷದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಯಾರಿಸ್ ಸದ್ಯ ಏಪ್ರಿಲ್‌ನಿಂದ ರಸ್ತೆಗಳಿಯಲಿದೆ. ಟೊಯೋಟಾ ತನ್ನ ತತ್ವವಾದ ಕ್ಯೂಡಿಆರ್ (ಗುಣಮಟ್ಟ, ದೀರ್ಘಬಾಳಿಕೆ ಮತ್ತು ನಂಬಿಕಾರ್ಹತೆ) ಗಳನ್ನು ಆಧರಿಸಿ ನಿರ್ಮಿಸಲಾದ ಈ ಕಾರು ಐಷಾರಾಮಿತನಕ್ಕೆ ಹೇಳಿ ಮಾಡಿಸಿದಂತಿದೆ. ಸುಂದರ ವಿನ್ಯಾಸ, ಸ್ಥಳಾನುಕೂಲ, ಗುಣಮಟ್ಟ ಮತ್ತು ಸಾಕಷ್ಟು ನವೀನ ಅನುಕೂಲಗಳು ಇದರಲ್ಲಿ ಇವೆ.

‘ಯಾರಿಸ್’ ಎನ್ನುವುದು ಗ್ರೀಕ್ ದೇವತೆಯ ಹೆಸರು. ಅದನ್ನೆ ನಾಮಕರಣ ಮಾಡಲಾಗಿದ್ದು, ಗ್ರೀಕ್‌ನಲ್ಲಿ ಈ ದೇವತೆ ಸೌಂದರ್ಯದ ಪ್ರತಿರೂಪವಾಗಿದೆ. ಗುಣಮಟ್ಟ, ನಿಶ್ಯಬ್ದತೆ, ದಕ್ಷ ಕಾರ‌್ಯಕ್ಷಮತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ನೂತನ ಕಾರು ನನ್ನ ಶ್ರೇಣಿಯಲ್ಲಿ ಪ್ರಥಮ ಎನಿಸಿದ 12 ವಿಶೇಷತೆಗಳಾದ ಪವರ್ ಡ್ರೈವರ್ ಸೀಟ್, 7 ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ರೂಫ್ ಮೌಂಟೆಡ್ ಏರ್ ವೆಂಟ್‌ಗಳು, ಟಿಪಿಎಂಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಎಲ್ಲಾ ಚಕ್ರಗಳಲ್ಲಿ
ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಯಾರಿಸ್ ತನ್ನ ಅತ್ಯಾಧುನಿಕ ಒಳಾಂಗಣ ವಿನ್ಯಾಸ ಮತ್ತು ಇತ್ತೀಚಿನ ಉನ್ನತ ಮಟ್ಟದ ಹೊರಾಂಗಣ ವಿನ್ಯಾಸಗಳೊಂದಿಗೆ ಜಾಗತಿಕ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್‌ನಿಂದ ಬುಕ್ಕಿಂಗ್ ಪ್ರಾರಂಭವಾಗಲಿದೆ.